ವಡ್ಡರಹಟ್ಟಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಗ್ರಾಮಸಭೆಯನ್ನು ವಕೀಲರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಉದ್ಘಾಟಿಸಿದರು. ಅಧ್ಯಕ್ಷೆ ಮಂಜುಳಾ ಶಿವಪ್ಪ ಹತ್ತಿಮರದ, ಉಪಾಧ್ಯಕ್ಷ ಗೌಸಸಾಬ್ ತಾಳಕೇರಿ, ಪಿಡಿಒ ಸುರೇಶ ಛಲುವಾದಿ ಇದ್ದರು. 
ಜಿಲ್ಲೆ

ಮಹಿಳೆಯರಿಗೆ ಕಾನೂನು ಅರಿವು ಮುಖ್ಯ

ಗಂಗಾವತಿ: ಮಹಿಳೆಯರ ಕಾಯ್ದೆಗಳನ್ನು ತಿಳಿದುಕೊಂಡರೆ ಹಕ್ಕುಗಳನ್ನು ಸರಳವಾಗಿ ಪಡೆಯಬಹುದು. ಆದ್ದರಿಂದ ಕಾನೂನಿನ ಅರಿವು ಮುಖ್ಯ ಎಂದು ವಕೀಲರ ಸಂಘದ ತಾಲೂಕು ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಪಂ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಗ್ರಾಮಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಹಲವು ಕಾಯ್ದೆಗಳು, ಸಬಲೀಕರಣಕ್ಕಾಗಿ ಕಾನೂನುಗಳು ಜಾರಿಯಲ್ಲಿದ್ದರೂ ಮಹಿಳೆಯರು ಇನ್ನೂ ಜಾಗೃತರಾಗಿಲ್ಲ. ಆಸ್ತಿ ಹಕ್ಕು, ಕೌಟುಂಬಿಕ ಹಾಗೂ ಕೆಲಸದ ಸ್ಥಳದಲ್ಲಿ ದೌರ್ಜನ್ಯ ತಡೆ ಕಾಯ್ದೆ, ರಾಜಕೀಯ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಮೀಸಲಿದ್ದರೂ ಪರಿಪೂರ್ಣವಾಗಿ ಸಾಕಾರಗೊಂಡಿಲ್ಲ. ತಾಲೂಕು ಮಟ್ಟದಲ್ಲಿ ಉಚಿತ ಕಾನೂನು ನೆರವು ಘಟಕವಿದ್ದು, ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಭಿವೃದ್ಧಿ ನಿರೀಕ್ಷಕಿ ಪೂರ್ಣಿಮಾ ಏಳುಬಾವಿ ಮಾತನಾಡಿ, ಬಾಲ್ಯ ವಿವಾಹ ತಡೆಗೆ ಸಂಕಲ್ಪ ಮಾಡಬೇಕಿದೆ. ಆರ್ಥಿಕವಾಗಿ ಸಬಲರಾದರೆ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ಶಿವಪ್ಪ ಹತ್ತಿಮರದ, ಸದಸ್ಯರಾದ ಮೇಹರಾಜ್ ದಳಪತಿ, ಹೊನ್ನುರಬೀ, ಹುಸೇನಪ್ಪ ಬಂಡೇ ನಾಯಕ, ಪಿಡಿಒ ಸುರೇಶ ಛಲುವಾದಿ, ಕಾರ್ಯದರ್ಶಿ ಈಶಪ್ಪ, ಮಹಿಳಾ ಸ್ವ-ಸಹಾಯ ಸಂಘದ ಪ್ರತಿನಿಧಿಗಳಾದ ಕವಿತಾ, ಎಂ.ಬಿ.ಕೆ.ನಾಗರತ್ನಾ ಇತರರಿದ್ದರು.