ಗಂಗಾವತಿ ವಿರುಪಾಪುರ ತಾಂಡಾ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಕಾರ್ಮಿಕರು ಮತ್ತು ಕಾರ್ಮಿಕ ಕುಟುಂಬದವರ ಆರೋಗ್ಯ ಮಂಗಳವಾರ ತಪಾಸಿಸಲಾಯಿತು. ಸಂಘದ ತಾಲೂಕಾಧ್ಯಕ್ಷ ಪಾಂಡುನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ಪ್ರತಿನಿಧಿ ರವಿನಾಯ್ಕ, ಸಂಘದ ಕಾರ್ಯದರ್ಶಿ ಶಿವಪ್ಪ ಜಾಗೋ ಗೋರ್ ಇತರರಿದ್ದರು.  
ಜಿಲ್ಲೆ

ಕಾರ್ಮಿಕರ ಆರೋಗ್ಯರಕ್ಷಣೆಗೆ ಒತ್ತು

ಗಂಗಾವತಿ: ನಗರದ ವಿರುಪಾಪುರ ತಾಂಡಾ ಸಮುದಾಯ ಭವನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ಕಾರ್ಮಿಕರು ಮತ್ತು ಕಾರ್ಮಿಕ ಕುಟುಂಬದವರಿಗಾಗಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಮಿಕ ಇಲಾಖೆ ಮತ್ತು ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಮತ್ತು ಕುಟುಂಬ ಸದಸ್ಯರನ್ನು ತಪಾಸಿಸಿ ಚಿಕಿತ್ಸೆ, ಸಲಹೆ ನೀಡಲಾಯಿತು.

ಹೃದಯ, ಮಧುಮೇಹ, ಮೂತ್ರಕೋಶ, ಕರುಳು ಸಂಬಂಧಿ ರೋಗಗಳನ್ನು ತಪಾಸಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಪ್ರತಿಷ್ಟಿತ ಆಸ್ಪತ್ರೆಗೆ ಶಿಾರಸು ಮಾಡಲಾಯಿತು.

ಶಿಬಿರ ಕುರಿತು ಸಂಘದ ತಾಲೂಕಾಧ್ಯಕ್ಷ ಪಾಂಡುನಾಯ್ಕ ಮಾತನಾಡಿ, ಶಿಬಿರ ಆಯೋಜನೆ ಮೂಲಕ ಕಾರ್ಮಿಕರ ಆರೋಗ್ಯರಕ್ಷಣೆಗೆ ಒತ್ತು ನೀಡಲಾಗುತ್ತಿದೆ ಎಂದರು. ತಾಂಡಾ ಅಭಿವೃದ್ಧಿ ನಿಗಮದ ಪ್ರತಿನಿಧಿ ರವಿನಾಯ್ಕ, ಸಂಘದ ಕಾರ್ಯದರ್ಶಿ ಶಿವಪ್ಪ ಜಾಗೋ ಗೋರ್, ಸದಸ್ಯರಾದ ಹನುಮಂತಪ್ಪ, ಕಷ್ಣ ನಾಯ್ಕ, ರವಿಚಂದ್ರ, ವೆಂಕಟೇಶ್ ಜಾಧವ್, ಕೀರಪ್ಪ ಹಾಗೂ ಆರೋಗ್ಯ ಕಾರ್ಯಕರ್ತರಿದ್ದರು.