ಗಂಗಾವತಿ: ನಗರದ ಗ್ರಾಮದೇವತೆ ಶ್ರೀ ದುರ್ಗಾದೇವಿ ದೇವಾಲಯದ ಜಾತ್ರಾಮಹೋತ್ಸವ ನಿಮಿತ್ತ ಶಾಸ್ತ್ರೋಕ್ತವಾಗಿ ರಥೋತ್ಸವ ಗುರುವಾರ ನೆರವೇರಿತು.
ಕರೊನಾ ಮುಂಜಾಗ್ರತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಥೋತ್ಸವಕ್ಕೆ ನಿರ್ಬಂಧಿಸಿದ್ದು, ಸಂಪ್ರದಾಯ ಬದ್ಧ ಆಚರಣೆಗಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ದುರ್ಗಾಮಾತೆಗೆ ಅಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ ಮತ್ತು ಸಾಮೂಹಿಕ ಪಾರಾಯಣ ಹಮ್ಮಿಕೊಳ್ಳಲಾಗಿತ್ತು. ಸರ್ವಾಲಂಕೃತ ಬೆಳ್ಳಿ ಮೂರ್ತಿಯನ್ನು ಬೆಳಗ್ಗೆ 9.50ಕ್ಕೆ ರಥದಲ್ಲಿ ಪ್ರತಿಷ್ಠಾಪಿಸಿ, ವೀರ ಸಾವರ್ಕರ್ ಮಾರ್ಗದವರಿಗೆ ಎಳೆಯಲಾಯಿತು.
ದೇವಿ ದರುಶನಕ್ಕಾಗಿ ಭಕ್ತರು ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದು, ದೇವಾಲಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಯಿತು. ಎರಡನೇ ವರ್ಷದ ರಥೋತ್ಸವವಾಗಿದ್ದು, ದೇವಾಲಯ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ರಥೋತ್ಸವ ಶಾಸ ಪೂರ್ಣಗೊಳಿಸಲಾಯಿತು. ದಾಸೋಹ ಕೈಬಿಡಲಾಯಿತು.
ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನನಾಗಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ನಗರಸಭೆ ಸದಸ್ಯ ಎಂ.ಡಿ.ಉಸ್ಮಾನ್, ದೇವಾಲಯ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ಪದಾಧಿಕಾರಿಗಳಾದ ಬಿ.ಲಿಂಗರಾಜಪ್ಪ, ಅಮರಜ್ಯೋತಿ ವೆಂಕಟೇಶ, ವೀರಭದ್ರಪ್ಪ ನಾಯಕ, ಬಿ.ಆಶೋಕ, ಜೋಗದ ಹನುಮಂತಪ್ಪನಾಯಕ, ನಾಗರಾಜ ಚಳಗೇರಿ, ಹುಲಿಗಿ ಯಮನೂರಪ್ಪ, ಕೆ.ವೆಂಕಟೇಶ ಇತರರಿದ್ದರು.