ಗಂಗಾವತಿ:ತಾಲೂಕಿನ ಹಣವಾಳದ ವೀರಭದ್ರೇಶ್ವರ ದೇವಾಲಯದಲ್ಲಿ ಶ್ರೀ ವೀರಭದ್ರೇಶ್ವರ 3ನೇ ವರ್ಷದ ಜಯಂತ್ಯುತ್ಸವ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಶ್ರೀ ವೀರಭದ್ರೇಶ್ವರ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದು, ಅರ್ಚಕ ವಿಶ್ವನಾಥ ಪೌರೋಹಿತ್ಯದಲ್ಲಿ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಂಗಳಾರತಿ, ಭಾವಚಿತ್ರಕ್ಕೆ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಸೇವಾ ಸಮಿತಿ ಅಧ್ಯಕ್ಷ ರಾಜಶೇಖರಗೌಡ ಮಾ.ಪಾಟೀಲ್ ಮಾತನಾಡಿ, ವೀರಭದ್ರೇಶ್ವರ ದೇವರಿಗೆ ಪುರಾಣದಲ್ಲಿ ಮಹತ್ವದ ಸ್ಥಾನವಿದೆ. ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಪ್ರತಿ ವರ್ಷ ಜಯಂತಿಯನ್ನು ಗ್ರಾಮಸ್ಥರು ಒಗ್ಗೂಡಿ ಆಯೊಜಿಸಿದ್ದು, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗಿದೆ ಎಂದರು.
ಪದಾಧಿಕಾರಿಗಳಾದ ದೊಡ್ಡನಗೌಡ ಮಾ.ಪಾಟೀಲ್, ಶರಣೇಗೌಡ ಮಾ. ಪಾಟೀಲ್, ಸಿ. ವೀರೇಶಪ್ಪ, ವೀರನಗೌಡ ಗದ್ದಿಗೌಡ್ರು, ದೊಡ್ಡನಗೌಡ ತಿಮ್ಮಾಪುರ, ಜಿ. ಬಸವರಾಜ ಮಾ.ಪಾಟೀಲ್, ವಿರೂಪಾಕ್ಷಗೌಡ ಹುಚ್ಚನಗೌಡ್ರು, ಜಿ. ಶರಣಪ್ಪ ಮಾ.ಪಾಟೀಲ್, ರಾಚಪ್ಪ ಮಾ.ಪಾಟೀಲ್, ಮಲ್ಲಯ್ಯ ಹುಚ್ಚನಗೌಡ್ರು, ವೀರಭದ್ರಪ್ಪ, ಕೆ.ಎಂ. ದೊಡ್ಡಯ್ಯಸ್ವಾಮಿ ಇತರರಿದ್ದರು.