ಜಿಲ್ಲೆ

ವರ್ಗಾವಣೆ ನೀತಿ ರೂಪಿಸಿ

ಗಂಗಾವತಿ: ಸ್ವಂತ ಜಿಲ್ಲೆಗೆ ತೆರಳಲು ವರ್ಗಾವಣೆ ನೀತಿ ರೂಪಿಸುವಂತೆ ಒತ್ತಾಯಿಸಿ ಅನ್ಯ ಜಿಲ್ಲೆಗಳಿಂದ ಬಂದ ಶಿಕ್ಷಕರು ಶಾಸಕ ಪರಣ್ಣ ಮುನವಳ್ಳಿಗೆ ಭಾನುವಾರ ಮನವಿ ಸಲ್ಲಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಗೊಂಡ ಅನ್ಯ ಜಿಲ್ಲೆಯ ಶಿಕ್ಷಕರು, ನೇಮಕ ಪ್ರಾಧಿಕಾರ ಷರತ್ತಿನಂತೆ ಐದು ವರ್ಷ ಪೂರ್ಣಗೊಳಿಸಿದ್ದಾರೆ. ಸ್ವಂತ ಜಿಲ್ಲೆಗೆ ವರ್ಗಾವಣೆಯಾಗಲು ಅಧಿವೇಶನದಲ್ಲಿ ಚರ್ಚಿಸುವಂತೆ ಒತ್ತಾಯಿಸಿದರು. ನೇಮಕ ಪ್ರಾಧಿಕಾರದ ಸೂಚನೆಯಂತೆ ಈಗಾಗಲೇ 10 ವರ್ಷಕ್ಕಿಂತ ಅಧಿಕ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಸ್ವಂತ ಜಿಲ್ಲೆಗೆ ವರ್ಗಾವಣೆ ಪಡೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.