ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಾಲೇಜು ಕ್ರೀಡಾಕೂಟವನ್ನು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಸೋಮವಾರ ಉದ್ಘಾಟಿಸಿದರು. ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ನಾಗೋಲಿ, ಪೈ ಮೆಡಿಕಲ್ ಕಾಲೇಜು ಸಹ ಸಂಸ್ಥಾಪಕ ಕೆ.ಗಾಂಧಿ ಇತರರಿದ್ದರು.  
ಜಿಲ್ಲೆ

ಶಿಕ್ಷಣ-ಉದ್ಯೋಗದಲ್ಲಿ ಮೀಸಲು ಸಾಧ್ಯ

ಗಂಗಾವತಿ: ದೈಹಿಕ ಸಾಮರ್ಥ್ಯ ಹೆಚ್ಚಿಸುವ ಆಟೋಟಗಳತ್ತ ಯುವಕರು ಗಮನಹರಿಸಬೇಕಿದ್ದು, ಪಾಠದಷ್ಟೇ ಆಟಕ್ಕೂ ಆದ್ಯತೆ ನೀಡುವಂತೆ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಪ.ಪೂ. ಶಿಕ್ಷಣ ಇಲಾಖೆ, ಪೈ ಮೆಡಿಕಲ್ ಅಕಾಡೆಮಿ ಮತ್ತು ಬಿಬಿಸಿ ಪಿಯು ಕಾಲೇಜು ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಆಟಗಳಲ್ಲಿ ಸಾಧನೆ ಮಾಡಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ದೊರೆಯಲಿದ್ದು, ಬುದ್ಧಿಯೊಂದಿಗೆ ದೇಹವನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ನಾಗೋಲಿ ಮಾತನಾಡಿ, ಓದಿನ ಜತೆಗೆ ಆಟಕ್ಕೂ ವಿದ್ಯಾರ್ಥಿಗಳು ಕೆಲ ಸಮಯ ಮೀಸಲಿಡುವಂತೆ ಸಲಹೆ ನೀಡಿದರು.

ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ, ವಿವಿಧ ಕಾಲೇಜು ಪ್ರಾಚಾರ್ಯರಾದ ಟಿ.ಸಿ. ಶಾಂತಪ್ಪ, ಡಾ.ಎನ್. ರವಿಚವ್ಹಾಣ, ಪ್ರೊ.ಶಿವಾನಂದ ಮೇಟಿ, ವಿನೋದ ಸಾಧನಾಲ, ನಿವೃತ್ತ ಪ್ರಾಚಾರ್ಯ ಜಿ.ಅನಿಲ್‌ಕುಮಾರ, ಪೈ ಮೆಡಿಕಲ್ ಕಾಲೇಜು ಸಹ ಸಂಸ್ಥಾಪಕ ಕೆ.ಗಾಂಧಿ, ಸಹ ಪ್ರಾಚಾರ್ಯ ಸಂದೀಪ ನಾಯಕ, ದೈಹಿಕ ಶಿಕ್ಷಣ ಉಪನ್ಯಾಸಕರಾದ ತಿರುಪತಿನಾಯಕ, ಚಂದ್ರಶೇಖರ್ ಇತರರಿದ್ದರು.