ಗಂಗಾವತಿ ಹಳೇ ತಹಸೀಲ್ ಕಚೇರಿ ಆವರಣದ ಸ್ನಾತಕೋತ್ತರ ಕೇಂದ್ರದಲ್ಲಿ ಕೊಪ್ಪಳ ವಿವಿ ಸ್ನಾತಕೋತ್ತರ ವಿಭಾಗದಿಂದ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು.ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಮುಮ್ತಾಜ್‌ಬೇಗಂ, ಅತಿಥಿ ಉಪನ್ಯಾಸಕರಾದ ಸುಲೋಚನಾ, ಶಿವಮೂರ್ತಿ, ಯಲ್ಲಮ್ಮ, ಅಜರ್, ಸೈಯದ್ ಇತರರಿದ್ದರು. 
ಜಿಲ್ಲೆ

ಸ್ವಾಮಿ ವಿವೇಕಾನಂದರ ಸಂದೇಶ ಅನುಕರಣೀಯ

ಗಂಗಾವತಿ: ಬದುಕು ನಿರಂತರ ಚಲನಶೀಲವಾಗಿರಬೇಕೆಂಬ ಸಂದೇಶ ನೀಡಿದ ಸ್ವಾಮಿ ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕ ಸತ್ಯವಾಗಿದ್ದು, ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕಿದೆ ಎಂದು ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಮುಮ್ತಾಜ್‌ಬೇಗಂ ಹೇಳಿದರು.

ನಗರದ ಹಳೇ ತಹಸೀಲ್ ಕಚೇರಿ ಆವರಣದ ಸ್ನಾತಕೋತ್ತರ ಕೇಂದ್ರದಲ್ಲಿ ಕೊಪ್ಪಳ ವಿವಿ ಸ್ನಾತಕೋತ್ತರ ವಿಭಾಗದಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ರಾಷ್ಟ್ರೀಯ ಯುವ ದಿನ ಆಚರಿಸಿ ಮಾತನಾಡಿದರು.

ನಾವು ಯಾರನ್ನೋ ಮಾದರಿಯಾಗಿಟ್ಟುಕೊಂಡು ಬದುಕುವುದಕ್ಕಿಂತ ನಾವೇ ಮಾದರಿ ವ್ಯಕ್ತಿಯಾಗುವಲ್ಲಿ ಶ್ರಮಿಸಬೇಕಿದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಮುಖ್ಯವಾಗಿದ್ದು, ವಿವೇಕಾನಂದರ ಸಂದೇಶ ಅನುಕರಣೀಯ. ಭ್ರಾತತ್ವ, ಸಮಾನತೆ ಪರಿಕಲ್ಪನೆಯನ್ನು ವಿಶ್ವಮಟ್ಟದಲ್ಲಿ ವಿಸ್ತರಿಸಿದರಲ್ಲದೇ, ಧಾರ್ಮಿಕ, ಸಾಮಾಜಿಕ ಮೌಢ್ಯಗಳನ್ನು ನಿಷ್ಠೂರವಾಗಿ ಖಂಡಿಸಿದರು ಎಂದರು.