ಗಂಗಾವತಿ: ಉಪವಿಭಾಗ ಆಸ್ಪತ್ರೆ ಸ್ಟಾಫ್ ನರ್ಸ್ಗೆ ಸೋಂಕು ಸೇರಿ ತಾಲೂಕಿನಲ್ಲಿ ಒಂದೇ ದಿನ ಕರೊನಾ ಸೋಂಕಿನ ಮೂರು ಪ್ರಕರಣ ಮಂಗಳವಾರ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಎರಡು ದಿನಗಳ ಹಿಂದೆ ವಕೀಲಗೇಟ್‌ನ 3 ವರ್ಷದ ಮಗುವಿನಲ್ಲಿ ಸೋಂಕು ದೃಢಪಟ್ಟಿದ್ದು, ತಂದೆಯಲ್ಲೂ ಸೋಂಕು ಪತ್ತೆಯಾಗಿದೆ. ಅದರಂತೆ ಹಲವು ವರ್ಷಗಳಿಂದ ಸ್ಟಾಫ್ ನರ್ಸ್ ಆಗಿ ಹೆರಿಗೆ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ 32 ವರ್ಷ ಮಹಿಳೆಯಲ್ಲಿ ಸೋಂಕು ಇದ್ದು, ವಡ್ಡರ ಓಣಿಯಲ್ಲಿ ವಾಸಿಸುತ್ತಿದ್ದರು. ತಾಲೂಕಿನ ಶ್ರೀರಾಮನಗದಲ್ಲಿ ಟೀ ಮಾರುವ ಉಡುಪಿ ಮೂಲದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮೂವರನ್ನು ಕೊಪ್ಪಳದ ಐಸೋಲೇಶನ್ ವಾರ್ಡ್‌ಗೆ ಶ್‌ಟಿ ಮಾಡಲಾಗಿದೆ.
ಸೀಲ್ ಡೌನ್: ನಗರದ ವಡ್ಡರ ಓಣಿಯಲ್ಲಿ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಅಣ್ಣಿಗೇರಿ ಮಸೀದಿ, ಒಡ್ಡರಓಣಿ, ಜವಾಹರನಗರ, ಜೋಗೇರ್ ಓಣಿ ಸಂಪರ್ಕದ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಉಪವಿಭಾಗ ಆಸ್ಪತ್ರೆಯ ಎಲ್ಲ ರೋಗಿಗಳನ್ನು 24 ಗಂಟೆ ಹೊರಗಡೆ ಕಳುಹಿಸಲಾಗಿದ್ದು, ಒಪಿಡಿ ಬಂದ್ ಮಾಡಲಾಗಿದೆ. ಸೋಂಕು ನಿವಾರಣೆ ದ್ರಾವಣ ಸಿಂಪರಣೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ನಗರಸಭೆ ಪೌರಾಯುಕ್ತ ಕೆ.ಸಿ.ಗಂಗಾಧರ, ಆರೋಗ್ಯ ನಿರೀಕ್ಷ ಎ.ನಾಗರಾಜ್, ವ್ಯವಸ್ಥಾಪಕ ಷಣ್ಮುಖಪ್ಪ, ನೈರ್ಮಲ್ಯ ನಿರೀಕ್ಷಕ ದತ್ತಾತ್ರೇಯ ಹೆಗಡೆ, ತಾಲೂಕು ವೈದ್ಯಾಧಿಕಾರಿ ಶರಣಪ್ಪ ಚಕೋಟಿ ಇದ್ದರು.
ಶ್ರೀರಾಮನಗರದ ಅಂಜೂರಿಕ್ಯಾಂಪ್‌ನಲ್ಲಿ 40ಮೀ. ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿದ್ದು, ಆರೋಗ್ಯ ಕಾರ್ಯಕರ್ತೆಯರ ತಂಡ ಕುಟುಂಬಗಳ ಸರ್ವೇ ಕೈಗೆತ್ತಿಕೊಂಡಿದ್ದಾರೆ.ಉಪತಹಸೀಲ್ದಾರ್ ಮಹೆಬೂಬ್‌ಅಲಿ, ಆರ್‌ಐ ಹನುಮಂತಪ್ಪ, ವೈದ್ಯಾಧಿಕಾರಿ ಶರಣಪ್ಪ ಚಕೋಟಿ, ಡಾ.ವೀರಾನಾಯ್ಕ, ಗ್ರಾಪಂ ಅಧ್ಯಕ್ಷ ಕೆ.ಶ್ರೀನಿವಾಸ, ಸದಸ್ಯರಾದ ಎಂ.ಜೆ.ರವಿ, ಮಹೆಬೂಬ್, ಕಿರಾಲಿ ರಾಮುಲ, ಪಿಡಿಒ ಮಹೇಶ ಇತರರಿದ್ದರು.