ವಿಶ್ವ ನೃತ್ಯ ಕಲಾವಿದರ ಸಂಘದ ತಾಲೂಕು ಘಟಕದಿಂದ ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಡ್ಯಾನ್ಸರ್ಸ್‌ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಬ್ಲುೃ ಬಾಯ್ಸ ತಂಡಕ್ಕೆ ಟ್ರೋಫಿ ವಿತರಿಸಲಾಯಿತು. ಸಂಘದ ಕ್ರೀಡಾ ಸಹ ಸಂಚಾಲಕ ಬಿ.ದೇವರಾಜ್,ಪದಾಧಿಕಾರಿಗಳಾದ ಮೋಜಸ್‌ಪಾಲ್, ಸಂತೋಷ, ಸುಂದರ್ ಇತರರಿದ್ದರು. 
ಜಿಲ್ಲೆ

ಬೆಂಗಳೂರಿನ ಬ್ಲುೃ ಬಾಯ್ಸ ಪ್ರಥಮ

ಗಂಗಾವತಿ: ವಿಶ್ವ ನೃತ್ಯ ಕಲಾವಿದರ ಸಂಘದ ತಾಲೂಕು ಘಟಕದಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಡ್ಯಾನ್ಸರ್ಸ್‌ ಕ್ರಿಕೆಟ್ ಲೀಗ್ ಪಂದ್ಯಾವಳಿ ಸೋಮವಾರ ಸಮಾರೋಪಗೊಂಡಿತು.

ರಾಜ್ಯ ವಿವಿಧ ಜಿಲ್ಲೆಯ 10ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, 6ಓವರ್‌ಗಳ ಲೀಗ್ ಹಂತದ ಪಂದ್ಯದಲ್ಲಿ ವಿವಿಧ ಜಿಲ್ಲೆಯ ತಂಡಗಳು ಸೆಣಿಸಾಡಿದವು. ರಾಜ್ಯಮಟ್ಟದ ನಟರಾಜ್ ಕಪ್‌ನ್ನು ಬೆಂಗಳೂರಿನ ಬ್ಲುೃ ಬಾಯ್ಸ ತಂಡ ಮುಡಿಗೇರಿಸಿಕೊಂಡಿತ್ತು. ದಾವಣಗೆರೆಯ ಡ್ಯಾನ್ಸರ್ಸ್‌ ಇಲೆವನ್ ತಂಡ (ದ್ವೀತಿಯ), ಹೊಸಪೇಟೆಯ ಟಿಡಿಎ ತಂಡ (ತೃತೀಯ) ಸ್ಥಾನ ಪಡೆದುಕೊಂಡಿತ್ತು. ವಿಜೇತ ತಂಡಗಳಿಗೆ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು. 3 ದಿನದ ಕ್ರಿಕೆಟ್ ಪಂದ್ಯಾವಳಿ ಕುರಿತು ಸಂಘದ ಕ್ರೀಡಾ ಸಹ ಸಂಚಾಲಕ ಬಿ.ದೇವರಾಜ್ ಮಾತನಾಡಿ, ಮೊದಲ ಬಾರಿಗೆ ಆಯೋಜಿಸಿದ್ದ ಪಂದ್ಯಾವಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೃತ್ಯ ಕಲಾವಿದರಲ್ಲಿನ ಕ್ರೀಡಾ ಪಟುಗಳನ್ನು ಗುರುತಿಸಲಾಗಿದೆ ಎಂದರು.

ಸಂಘದ ವಿವಿಧ ಜಿಲ್ಲೆಯ ಪ್ರತಿನಿಧಿಗಳಾದ ಶರತ್, ಚೆಲ್ವಾ ದಿಲೀಪ್, ಕಷ್ಣಾ, ಮಧುಸೂದನ್, ಮಹೇಶ, ಆದಿತ್ಯ, ಚೇತನ್ ಪವಾರ್, ಸಂತೋಷ, ಶಶಾಂಕ್, ಹೇಮಂತ, ತಾಲೂಕು ಘಟಕದ ಪದಾಧಿಕಾರಿಗಳಾದ ಮೋಜಸ್‌ಪಾಲ್, ಶಂಕರ ಕುರುಗೋಡು, ಹರ್ಷವರ್ಧನ, ಸಂತೋಷ, ಸುಂದರ್, ರವಿ, ಮಂಜುನಾಥ ಇತರರಿದ್ದರು.