ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಮೊಸರಿನ ಮಡಕೆ ಒಡೆಯುವ ಸ್ಪರ್ಧೆ ಗಮನ ಸೆಳೆಯಿತು.  
ಜಿಲ್ಲೆ

ಭಗವಂತನ ನಾಮ ಸ್ಮರಣೆ ಅಗತ್ಯ

ಗಂಗಾವತಿ: ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿಭಿನ್ನ ಕಾರ್ಯಕ್ರಮಗಳನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಶ್ರೀಕೃಷ್ಣ, ರಾಧೆ ವೇಷಭೂಷಣ, ಶ್ರೀಕೃಷ್ಣನ ಉಪದೇಶಗಳನ್ನೊಳಗೊಂಡ ನೃತ್ಯರೂಪಕ, ಕೃಷ್ಣನ ಸಂದೇಶಗಳನ್ನು ಸಾರುವ ಗೀತಗಾಯನ, ವಿವಿಧ ವಿನೋದಾವಳಿಗಳು ಗಮನ ಸೆಳೆದವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, ಭಗವಾನ್ ಶ್ರೀಕೃಷ್ಣನ ನಾಮಸ್ಮರಣೆ ಮಾಡಬೇಕಿದೆ. ಯುಕ್ತಿ, ಶಕ್ತಿ, ಭಕ್ತಿ ಹಾಗೂ ಪ್ರೀತಿಯ ಕುರಿತು ಅಭಿಪ್ರಾಯ ಹಂಚಿಕೊಂಡರು.

ಶ್ರೀಕೃಷ್ಣನ ಜೀವನ, ಸುಧಾಮನ ಸ್ನೇಹ, ತಾಯಂದಿರ ವಾತ್ಸಲ್ಯ, ಮಮತೆ ಕುರಿತು ನಿರ್ದೇಶಕ ಎಚ್.ಕೆ.ಚಂದ್ರಮೋಹನ ಮಾತನಾಡಿದರು. ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ಶೈಕ್ಷಣಿಕ ಮುಖ್ಯಸ್ಥೆ ಎಸ್. ಕೃಷ್ಣವೇಣಿ, ಪಿಯುಸಿ ವಿಭಾಗದ ಮುಖ್ಯಸ್ಥ ಎಸ್.ವಿ.ಎನ್ ಶಾಸೀ, ಪಿ.ಆರ್.ಎಂ. ನಿಂಗಪ್ಪ, ಪ್ರಾಚಾರ್ಯೆ ಜೆ.ಪುಷ್ಪಲತಾ, ಶಿಕ್ಷಕರು ಮತ್ತು ಸಿಬ್ಬಂದಿ ಇದ್ದರು.

ತಾಲೂಕಾಡಳಿತ ಸೌಧ: ಇಲ್ಲಿಯೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ತಹಸೀಲ್ದಾರ್ ಯು.ನಾಗರಾಜ್, ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದರು. ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಸಿಬ್ಬಂದಿ ಶಿವಶಂಕರ, ನಾಗರತ್ನ್ನಾ, ಕವಿತಾ, ನರ್ಮದಾ, ಯಾದವ ಸಮುದಾಯದ ಮುಖಂಡರಾದ ಎಚ್.ಸಿ.ಯಾದವ್, ಹುಲುಗಪ್ಪ ಇತರರಿದ್ದರು.

ಕೆಂದೋಳೆ ರಾಮಣ್ಣ ಶಾಲೆ: ನಗರದ ಕೆಂಧೋಳೆ ರಾಮಣ್ಣ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿವಿಧ ಸ್ಪರ್ಧೆ ಮತ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ಕಷ್ಣ, ರಾಧೆ ವೇಷ ಧರಿಸಿ ಸಂಭ್ರಮಿಸಿದರು. ಮುದ್ದು ಮಕ್ಕಳ ಭಾಷಣ, ಸಂಭಾಷಣೆ, ಛದ್ಮವೇಷ ಮುಂತಾದ ಕಾರ್ಯಕ್ರಮ ಗಮನಸೆಳೆದವು. ಈ ಕುರಿತು ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಲ್ಯಾಣಿ ಮಾತನಾಡಿದರು. ವೇಷಭೂಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪಿಯು ಕಾಲೇಜಿನ ಪ್ರಾಚಾರ್ಯ ಶಿವಾನಂದ, ಮುಖ್ಯಶಿಕ್ಷಕ ಮದ್ದಾನಪ್ಪ, ಪಾಲಕ ಪ್ರತಿನಿಧಿಗಳಾದ ಬಾಷಾಸಾಬ್, ವಿಜಯಲಕ್ಷ್ಮೀ, ತ್ರಿವೇಣಿ, ಸೌಮ್ಯಾ ಇತರರಿದ್ದರು.

ಅಕ್ಷರ ಪಬ್ಲಿಕ್ ಸ್ಕೂಲ್: ನಗರದ ಅಕ್ಷರ ಪಬ್ಲಿಕ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀಕೃಷ್ಣನ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಕೃಷ್ಣನ ವೇಷಧಾರಿಗಳು ನತ್ಯ ರೂಪಕಗಳನ್ನು ಪ್ರದರ್ಶಿಸಿದರು. ಕಷ್ಣನ ಸಂದೇಶಗಳನ್ನು ಸಾರುವ ಗೀತೆಗಳು ಗಾಯನ, ನೃತ್ಯ ವಿನೋದಾವಳಿಗಳು ಪ್ರಸ್ತುತಪಡಿಸಲಾಯಿತು. ಮುಖ್ಯಶಿಕ್ಷಕಿ ಹಿಮಾರೆಡ್ಡಿ ಸತ್ತಿ ಮಾತನಾಡಿದರು. ನಂತರ ಮಕ್ಕಳಿಂದ ಮೊಸರಿನ ಮಡಕೆ ಒಡೆಯುವ ಸ್ಪರ್ಧೆ, ಪಾಲಕರಿಗೆ ಮಡಕೆ ಅಲಂಕಾರ, ಚಿತ್ರಕಲಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಿಕ್ಷಕರಾದ ತೇಜಸ್ಸು, ಸಹನಾ, ಪಾರ್ವತಿ, ಗೌರಿ, ರೇಷ್ಮಾ, ಪುಷ್ಪಾ, ಜಯಶ್ರೀ ಶ್ವೇತಾ, ಮಂಜುಳಾ ಇತರರಿದ್ದರು.