ಗಂಗಾವತಿ: ನಗರದ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ತಾಲೂಕು ಕುಂಬಾರ ಸಮಾಜದಿಂದ ತ್ರಿಪದಿ ಕವಿ ಸರ್ವಜ್ಞ ಜಯಂತಿ ಭಾನುವಾರ ಆಚರಿಸಲಾಯಿತು.
ಭಾವಚಿತ್ರವನ್ನು ನಗರದ ಶ್ರೀಚನ್ನ ಮಲ್ಲಿಕಾರ್ಜುನ ದೇವಾಲಯದಿಂದ ಶ್ರೀ ರಾಮಲಿಂಗೇಶ್ವರ ದೇಗುಲದವರೆಗೆ ಕುಂಭ, ಕಳಸ ಮತ್ತು ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನೆರವೇರಿಸಲಾಯಿತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ತ್ರಿಪದಿಗಳ ಮೂಲಕ ಸಾಮರಸ್ಯಕ್ಕೆ ಆದ್ಯತೆ ನೀಡಿದ ಸರ್ವಜ್ಞನ ಪದಗಳು ಸರ್ವ ಕಾಲಕ್ಕೂ ಮಾನ್ಯವಾಗಿವೆ ಎಂದರು.
ದೇವಾಲಯದಲ್ಲಿ ವಿಶೇಷ ಪೂಜೆ, ಧಾರ್ಮಿಕಸಭೆ ಮತ್ತು ಸಾಮೂಹಿಕ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಕುಂಬಾರ ಸಮಾಜದ ತಾಲೂಕಾಧ್ಯಕ್ಷ ರಾಜಶೇಖರ ಕುಂಬಾರ, ಮುಖಂಡರಾದ ಅಂದಪ್ಪ ಕುಂಬಾರ, ಕೊಟ್ರೇಶ್ ಕುಂಬಾರ, ಅಮರೇಶ್ ಕುಂಬಾರ, ಮಂಜುನಾಥ್ ಕುಂಬಾರ, ಶರಣಪ್ಪ ಕುಂಬಾರ, ನಾಗೇಶ ಕುಂಬಾರ, ಪಂಪಾಪತಿ ಕುಂಬಾರ, ಕಾಶೀನಾಥ ಚಿತ್ರಗಾರ, ಸಂಗಯ್ಯ ಸ್ವಾಮಿ, ಶ್ರೀನಿವಾಸ ದೂಳಾ ಇತರರಿದ್ದರು.