ಜಿಲ್ಲೆ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ

ಗಂಗಾವತಿ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ನಿರಂತರ ಕಲಿಯುವ ಗುಣಗಳು ಶಿಕ್ಷಕನಲ್ಲಿರಬೇಕಿದೆ ಎಂದು ಎಸ್‌ಕೆಆರ್ ಪಿಯು ಕಾಲೇಜಿನ ಪ್ರಾಚಾರ್ಯ ಪ್ರೊ.ಶಿವಾನಂದ ಮೇಟಿ ಹೇಳಿದರು.

ನಗರದ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಜಿಲ್ಲಾಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಕಾಯಕ ಸಂಕಲ್ಪ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ನಿರಂತರ ಕಲಿಯು ವಿದ್ಯಾರ್ಥಿಯಾಗಿದ್ದು, ಕಾಲ ಬದಲಾದರೂ ಪಾತ್ರ ಮತ್ತು ವೃತ್ತಿ ಪಾವಿತ್ರ್ಯ ಬದಲಾಗಿಲ್ಲ. ವತ್ತಿಯ ಬಗ್ಗೆ ಗೌರವ ಮತ್ತು ಬದ್ಧತೆ ಇಲ್ಲದಿದ್ದರೆ ಯಾವ ಕೆಲಸಕ್ಕೂ ಗೌರವ ತರಲಾರದು. ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯೊಂದಿಗೆ ಜೀವನದ ಆದರ್ಶಗಳನ್ನು ಇಂದಿನ ತಲೆಮಾರಿಗೆ ತಲುಪಿಸಲು ಕಾರ್ಯ ಮಾಡಬೇಕಿದೆ ಎಂದರು.

ಮಹಾವಿದ್ಯಾಲಯ ಪ್ರಾಚಾರ್ಯ ಮತ್ತು ಬಳ್ಳಾರಿ ವಿವಿ ಸಿಂಡಿಕೇಟ್ ಸದಸ್ಯ ಡಾ.ಕೆ.ಸಿ.ಕುಲ್ಕರ್ಣಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ವಿಭಾಗೀಯ ಅಧ್ಯಕ್ಷ ಪ್ರೊ.ಶರಣಬಸಪ್ಪ ಬಿಳಿಯಲೆ ಮಾತನಾಡಿದರು. ವಿವಿಧ ವಿವಿಗೆ ನೇಮಕಗೊಂಡ ಸೆನೆಟ್ ಸದಸ್ಯರಾದ ಬಸವರಾಜ ಅಯೋಧ್ಯ, ಡಾ.ಕೆ.ಸಿ.ಕುಲಕರ್ಣಿ, ಡಿ.ಎಂ.ಅಭಿಷೇಕ, ಸರ್ಕಾರಿ ಪದವಿ ಕಾಲೇಜುಗಳ ಪ್ರಾಧ್ಯಾಪಕರ ಸಂಘದ ವಿಭಾಗದ ಅಧ್ಯಕ್ಷ ಪ್ರೊ.ಸುಂಕೇಶ್ವರ ಕರಿಗೂಳಿ ಮತ್ತು ಕಸಾಪ ತಾಲೂಕಾಧ್ಯಕ್ಷ ಎಂ.ರುದ್ರೇಶ ಆರಾಳ್‌ರನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾ ಕಾರ್ಯದರ್ಶಿ ಗುಂಡೂರು ಪವನಕುಮಾರ್, ಶಿಕ್ಷಕರಾದ ಕೆ.ಎಂ.ಶಿವಪ್ರಕಾಶ, ಜಯರಾಂ, ಮಲ್ಲಮ್ಮ ಇತರರಿದ್ದರು.