ಗಂಗಾವತಿ ಸೇಂಟ್ ಪಾಲ್ಸ್ ಶಾಲೆಯಲ್ಲಿ ಸೇಂಟ್ ಪಾಲ್ಸ್ ಮಹಿಳಾ ವಿದ್ಯಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಕೃಷಿ ಹಬ್ಬವನ್ನು ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸರ್ವೇಶ ವಸದ್ ಭಾನುವಾರ ಉದ್ಘಾಟಿಸಿದರು. ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಶರಣಪ್ಪ ದೊಡ್ಮನಿ, ಶಾಲಾಡಳಿತ ಮಂಡಳಿ ಪದಾಧಿಕಾರಿಗಳಾದ ಸುಜಾತಾ ವಸದ್,ಕೃತಿಕ್ ವಸದ್, ಸಾತ್ವಿಕ್‌ಇತರರಿದ್ದರು. 
ಜಿಲ್ಲೆ

ಅನ್ನ ನೀಡುವ ರೈತರನ್ನು ನಿತ್ಯ ಸ್ಮರಿಸೋಣ

ಗಂಗಾವತಿ: ಕೃಷಿ ಚಟುವಟಿಕೆಗಳ ವಿಸ್ತಾರಕ್ಕಾಗಿ ವಿದ್ಯಾರ್ಥಿಗಳಲ್ಲಿ ಬೇಸಾಯ ಪದ್ಧತಿಯ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಕೃಷಿ ಉಪಕರಣಗಳನ್ನು ಪರಿಚಯಿಸಲಾಗುತ್ತಿದೆ ಎಂದು ಸೇಂಟ್ ಪಾಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸರ್ವೇಶ ವಸದ್ ಹೇಳಿದರು.

ನಗರದ ಸೇಂಟ್ ಪಾಲ್ಸ್ ಶಾಲೆಯಲ್ಲಿ ಸೇಂಟ್ ಪಾಲ್ಸ್ ಮಹಿಳಾ ವಿದ್ಯಾ ಸಂಸ್ಥೆ, ಆಂಗ್ಲ ಮಾಧ್ಯಮ ಶಾಲೆ ಮತ್ತು ಡಿ.ಾರ್ಮಸಿ ಕಾಲೇಜು ಸಹಯೋಗದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಕೃಷಿ ಹಬ್ಬ ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನ ಬೆಳೆದಂತೆಲ್ಲ ಕೃಷಿ ಪದ್ಧತಿಯನ್ನು ಮರೆಯುತ್ತಿದ್ದೇವೆ. ತಂತ್ರಜ್ಞಾನದ ಆವಿಷ್ಕಾರಗಳ ಮೂಲಕ ಕೃಷಿ ಚಟುವಟಿಕೆಗಳನ್ನು ತೀವ್ರ ಗೊಳಿಸಬಹುದು. ಆಹಾರ ಭದ್ರತೆಗೆ ಕೃಷಿ ಮೂಲಧಾರವಾಗಿದ್ದು, ಅನ್ನ ನೀಡುವ ರೈತರನ್ನು ನಿತ್ಯ ಸ್ಮರಿಸೋಣ ಎಂದರು.

ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಶರಣಪ್ಪ ದೊಡ್ಮನಿ ಮಾತನಾಡಿ, ಕೃಷಿಯ ಪಾರಂಪರಿಕ ಪದ್ಧತಿಯೊಂದಿಗೆ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕೃಷಿ ಚಟುವಟಿಕೆಗಳ ಉಪಕರಣಗಳ ಬಗ್ಗೆ ಶಾಲಾ ಮಕ್ಕಳಲ್ಲಿ ಮಾಹಿತಿ ನೀಡಬೇಕಿದೆ ಎಂದರು.

ರೈತರು ಉಪಯೋಗಿಸುವ ಸಾಮಾಗ್ರಿ ಮತ್ತು ತಂತ್ರಜ್ಞಾನ ಪ್ರದರ್ಶನ, ದ್ವಿದಳ, ಸಿರಿಧಾನ್ಯ, ಎಣ್ಣೆಕಾಳುಗಳ ಬಳಕೆ, ಅಗತ್ಯತೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ನಂತರ ಕೃಷಿ ವೇಷಭೂಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಾಲಾಡಳಿತ ಮಂಡಳಿ ಪದಾಧಿಕಾರಿಗಳಾದ ರಾಜೇಶ ವಸದ್, ಪ್ರಾಂಶುಪಾಲ ಶಿವಲಿಂಗಪ್ಪ, ಮುಖಂಡರಾದ ಮಂಜುನಾಥ, ನಿತ್ಯಾನಂದ, ರಾಘವೇಂದ್ರ ತೂನಾ ಇತರರಿದ್ದರು.