ಹಿರಿಯ ಸಾಹಿತಿ ಪದ್ಮಭೂಷಣ ಡಾ.ಎಸ್.ಎಲ್.ಭೈರಪ್ಪ ನಿಧನಕ್ಕೆ ಗಂಗಾವತಿ ತಾಲೂಕಿನ ಶ್ರೀರಾಮಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ, ಸಹಾಯಕ ಪ್ರಾಧ್ಯಾಪಕರಾದ ಕೆ.ವಿರೂಪಾಕ್ಷ, ಎಂ.ಶಂಕ್ರಪ್ಪ ಇತರರಿದ್ದರು.  
ಜಿಲ್ಲೆ

ಭೈರಪ್ಪರ ಆಲೋಚನೆ ಯುವಜನತೆ ಗ್ರಹಿಸಲಿ

ಗಂಗಾವತಿ: ಹಿರಿಯ ಸಾಹಿತಿ ಪದ್ಮಭೂಷಣ ಡಾ.ಎಸ್.ಎಲ್.ಭೈರಪ್ಪ ನಿಧನಕ್ಕೆ ತಾಲೂಕಿನ ಶ್ರೀರಾಮಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ನಂತರ ಮೌನಾಚರಣೆಯೊಂದಿಗೆ ಗೌರವ ಸಲ್ಲಿಸಲಾಯಿತು.

ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಮಾತನಾಡಿ, ಭೈರಪ್ಪ ಅವರ ಸಾಹಿತ್ಯದ ಕೊಡುಗೆ ಅಪಾರವಾಗಿದ್ದು, ಕತಿಗಳಲ್ಲಿರುವ ಮಾನವೀಯ ನೆಲೆಗಳು ಎಲ್ಲೆಡೆ ಪಸರಿಸಲಿ. ಮುಂದಿನ ಪೀಳಿಗೆ ಭೈರಪ್ಪ ಅವರ ಆಲೋಚನೆಗಳನ್ನು ಮಾನವೀಯತೆ ನೆಲೆಯಲ್ಲಿ ಗ್ರಹಿಸುವಂತಾಗಲಿ ಎಂದರು.

ಸಹಾಯಕ ಪ್ರಾಧ್ಯಾಪಕ ಕೆ.ವಿರೂಪಾಕ್ಷ ಮಾತನಾಡಿ, ಸಾಹಿತ್ಯದಾಚೆಗೆ ಅವರ ಸಾರ್ವಜನಿಕ ಜೀವನವು ಕೂಡ ಚರ್ಚೆಗೆ ಗುರಿಯಾಗಿತ್ತು ಎಂದರು.

ಸಹಾಯಕ ಪ್ರಾಧ್ಯಾಪಕರಾದ ಎಂ.ಶಂಕ್ರಪ್ಪ, ಡಾ. ಶಶಿಕುಮಾರ, ಐಕ್ಯೂಎಸಿ ಸಂಚಾಲಕ ರವಿಕುಮಾರ, ಬೋಧಕೇತರ ಸಿಬ್ಬಂದಿ ಜಬೀನಾ ಬೇಗಂ, ವಿನಾಯಕ ಜಾಗೀರದಾರ್, ಚಿನ್ನ ವರಪ್ರಸಾದ್, ಶರಣ, ಶಾಂತಿ ಮತ್ತು ವಿದ್ಯಾರ್ಥಿಗಳಿದ್ದರು.