ಗಂಗಾವತಿ: ಜ್ಞಾನ ಉನ್ನತಿಗೆ ಪುಸ್ತಕಗಳೇ ಮೂಲಾಧಾರವಾಗಿದ್ದು, ಓದುವಿಕೆಯನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕಿದೆ ಎಂದು ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಸುಂಕೇಶ್ವರ ಕರಿಗೂಳಿ ಹೇಳಿದರು.
ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವಪುಸ್ತಕ ಮತ್ತು ಹಕ್ಕು ಸ್ವಾಮ್ಯ ದಿನಾಚರಣೆಯಲ್ಲಿ ಮಾತನಾಡಿದರು.
ವ್ಯಕ್ತಿತ್ವ ವಿಕಸನಕ್ಕೆ ಪುಸಕ್ತ ಓದುವಿಕೆ ಪೂರಕವಾಗಿದ್ದು, ಮೊಬೈಲ್‌ನಲ್ಲೂ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕು. ಮನರಂಜನೆ ಕಡಿಮೆ ಮಾಡಿ ಕಲಿಕೆಯತ್ತ ಗಮನಹರಿಸಿ. ಹಕ್ಕುಸ್ವಾಮ್ಯದಾರರ ಅನುಮತಿಯಿಲ್ಲದೇ ಅವರ ವಿಚಾರಗಳನ್ನು ನಕಲು ಮಾಡುವುದು ಕತಿಚೌರ್ಯವಾಗಲಿದ್ದು, ಶಿಕ್ಷಾರ್ಹ ಅಪರಾಧ ಎಂದರು. ಡಿಜಿಟಲ್ ಪುಸ್ತಕ, ಇ-ಪುಸ್ತಕ ಮತ್ತು ಆಡಿಯೋ ಪುಸ್ತಕಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯೆ ಡಾ.ಕೆ.ಎಸ್.ಶೋಭಾ ಮಾತನಾಡಿದರು. ಸಂವಿಧಾನ ಪೂರ್ವಪೀಠಿಕೆ ಸಾಮೂಹಿಕ ವಾಚಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಸಹಾಯಕ ಪ್ರಾಧ್ಯಾಪಕರಾದ ಕೆ.ತಾತಪ್ಪ, ರವಿಕುಮಾರ, ಶಶಿಕುಮಾರ, ಡಾ.ಸರ್ರಾಜ್, ವಿರೂಪಾಕ್ಷಪ್ಪ, ಶಂಕ್ರಪ್ಪ, ಉಪನ್ಯಾಸಕರಾದ ವೆಂಕಟರಾಜು, ಪೀರಾವಲಿ, ಪರಶುರಾಮ್, ಸಂಧ್ಯಾ, ಈಶಪ್ಪ ಮೇಟಿ, ಶಾಂತಿ, ಗ್ರಂಥಪಾಲಕ ಡಾ.ದೇವರಾಜ್ ಇತರರಿದ್ದರು.