ಗಂಗಾವತಿ 4ನೇ ವಾರ್ಡ್ ಸವಿತಾ ಸಮಾಜದ ಓಣಿಯಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬ ತೆರವುಗೊಳಿಸುವಂತೆ ಒತ್ತಾಯಿಸಿ ವಾರ್ಡ್ ನಿವಾಸಿಗಳು ಕಂಬದ ಮುಂದೆ ನಿಂತು ಬುಧವಾರ ಪ್ರತಿಭಟನೆ ನಡೆಸಿದರು. ನಿವಾಸಿಗಳಾದ ಅಶ್ವಿನಿ, ಲಕ್ಷ್ಮೀ, ಮುನಿಯಮ್ಮ, ಹೇಮಾವತಿ ಇತರರಿದ್ದರು.  
ಜಿಲ್ಲೆ

ಶಿಥಿಲ ವಿದ್ಯುತ್ ಕಂಬಗಳ ತೆರವುಗೊಳಿಸಿ

ಗಂಗಾವತಿ: ನಗರದ 4ನೇ ವಾರ್ಡ್ ಸವಿತಾ ಸಮಾಜದ ಓಣಿಯಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬಗಳ ತೆರವಿಗೆ ಒತ್ತಾಯಿಸಿ ವಾರ್ಡ್ ನಿವಾಸಿಗಳು ವಿದ್ಯುತ್ ಕಂಬದ ಮುಂದೆ ನಿಂತು ಬುಧವಾರ ಪ್ರತಿಭಟನೆ ನಡೆಸಿದರು.

ಓಣಿಯ ಕಿರಿದಾದ ರಸ್ತೆಯಲ್ಲಿ ವಿದ್ಯುತ್ ಕಂಬಗಳಿದ್ದು, ಸಂಪರ್ಕದ ವೈರ್‌ಗಳು ಕೆಳಮಟ್ಟದಲ್ಲಿವೆ. ಕೆಲವು ಶಿಥಿಲಗೊಂಡಿದ್ದು, ಅನಾಹುತಕ್ಕೆ ಕಾರಣವಾಗಿವೆ. ಮಳೆಗಾಲದಲ್ಲಿ ಕೆಳಮಟ್ಟದಲ್ಲಿರುವ ವಿದ್ಯುತ್ ವೈರ್‌ಗಳಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು, ಸಂಚರಿಸುವರಿಗೆ ಅನಾಹುತಕ್ಕೆ ಕಾರಣವಾಗುತ್ತಿವೆ.

ಓಣಿಯಲ್ಲಿ ಜಾಗದ ಕೊರತೆಯಿಂದ ವಿದ್ಯುತ್ ಕಂಬದ ಬಳಿಯಲ್ಲಿ ಮಕ್ಕಳ ಆಟವಾಡಬೇಕಿದ್ದು, ಕೆಳಮಟ್ಟದ ವೈರ್‌ಗಳಿಂದ ಸಾಕಷ್ಟು ತೊಂದರೆಗಳಾದ ಉದಾಹರಣೆಗಳಿವೆ. ಕಂಬಗಳ ತೆರವಿಗೆ ಜೆಸ್ಕಾಂ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ನಿವಾಸಿಗಳಾದ ಅಶ್ವಿನಿ,ಲಕ್ಷ್ಮೀ, ಮುನಿಯಮ್ಮ, ಹೇಮಾವತಿ, ನಂದಿತಾ, ಗೀತಾ, ನಾಗವೇಣಿ, ಸುಜಾತಾ ಇತರರು ಒತ್ತಾಯಿಸಿದರು.