ಗಂಗಾವತಿ ತಾಲೂಕಿನ ದಾಸನಾಳ ಬಳಿಯ ತುಂಗಭದ್ರಾ ಎಡದಂಡೆಯ 17ನೇ ವಿತರಣೆ ಕಾಲುವೆಗೆ ಕಲಬುರಗಿ ವಿಭಾಗದ ಪ್ರಭಾರ ಪ್ರಾದೇಶಿಕ ಆಯುಕ್ತ ಎಂ.ಸುಂದರೇಶ ಬಾಬು ಗುರುವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು. ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಇತರರಿದ್ದರು. 
ಜಿಲ್ಲೆ

ಸಮ ಪ್ರಮಾಣದಲ್ಲಿ ನೀರು ಹರಿಸಿ

ಗಂಗಾವತಿ: ವಿತರಣೆ ಕಾಲುವೆಗಳಿಗೆ ಹಂಚಿಕೆಯಾದ ನೀರು ಸಮ ಪ್ರಮಾಣದಲ್ಲಿ ಹರಿಸುವ ಜವಾಬ್ದಾರಿ ಟಾಸ್‌‌ಕೆೆರ್ಸ್ ಸಮಿತಿಗಿದ್ದು, ಕಾಲುವೆಗಳ ಮೇಲೆ ದಿನದ 24ಗಂಟೆ ನಿಗಾವಹಿಸುವಂತೆ ಕಲಬುರಗಿ ವಿಭಾಗದ ಪ್ರಭಾರ ಪ್ರಾದೇಶಿಕ ಆಯುಕ್ತ ಎಂ.ಸುಂದರೇಶ ಬಾಬು ಹೇಳಿದರು.

ತಾಲೂಕಿನ ದಾಸನಾಳ ಬಳಿಯ ತುಂಗಭದ್ರಾ ಎಡದಂಡೆಯ ನಂ.17ನೇ ವಿತರಣೆ ಕಾಲುವೆಗೆ ಗುರುವಾರ ರಾತ್ರಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಭೇಟಿ

ನೀಡಿ ಮಾತನಾಡಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶದಂತೆ ತುಂಗಭದ್ರಾ ಎಡದಂಡೆ ಕಾಲುವೆಗೆ ಭೇಟಿ ನೀಡಿದ್ದು, ಸರಿಯಾದ ಪ್ರಮಾಣದಲ್ಲಿ ನೀರಿನ ಹರಿವನ್ನು ಖಾತ್ರಿ ಪಡಿಸಿಕೊಳ್ಳಲಾಗಿದೆ. 3 ಸಾವಿರ ಕ್ಯೂಸೆಕ್‌ನಂತೆ ತುಂಗಭದ್ರಾ ಎಡದಂಡೆ ಕಾಲುವೆಗಳಿಗೆ ಹರಿಸಲಾಗುತ್ತಿರುವ ನೀರು ಈಗಾಗಲೇ ವಿವಿಧ ವಿತರಣೆ ಕಾಲುವೆಗಳಿಗೆ ಹಂಚಿಕೆಯಾಗುತ್ತಿದೆ. ನೀರು ಹರಿಸುವಿಕೆಯಲ್ಲಿ ಲೋಪವಾಗದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿಗಾವಹಿಸುವಂತೆ ಸೂಚಿಸಿದರು. ತುಂಗಭದ್ರಾ ಎಡದಂಡೆ ಕಾಲುವೆಗಳಿಗೆ ಹರಿಸಲಾದ ನೀರಿನ ಸಮರ್ಪಕ ಹಂಚಿಕೆಗೆ ಸಂಬಂಧಪಟ್ಟಂತೆ ಖುದ್ದಾಗಿ ಕಾಲುವೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ರಾಮ್ ಎಲ್.ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ನೀರಾವರಿ ಇಲಾಖೆ ನಂ.2 ವಿಭಾಗದ ಇಇ ಎಂ.ಎಸ್. ಗೋಡೆಕರ್, ತಹಸೀಲ್ದಾರ್ ಯು.ನಾಗರಾಜ್, ಟಾಸ್ಕ್ ೆರ್ಸ್ ಸಮಿತಿ ಸದಸ್ಯರಿದ್ದರು.