ವಿವಿಧ ಜಿಲ್ಲೆ ಸಂಪರ್ಕದ ರೈಲು ಯೋಜನೆಯನ್ನು ಗಂಗಾವತಿ ತಾಲೂಕಿಗೂ ವಿಸ್ತರಿಸುವಂತೆ ಒತ್ತಾಯಿಸಿ ರಡ್ಡಿ ಯುವ ಜನ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಸಿಎಂ ಆರ್ಥಿಕ ಸಲಹೆಗಾರ ಬಸವರಾಜರಾಯರಡ್ಡಿಗೆ ಯಲಬುರ್ಗಾದ ಶಾಸಕರ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಸಂಘದ ಗೌರವ ಅಧ್ಯಕ್ಷ ವಿಶ್ವನಾಥ ಮಾಲಿ ಪಾಟೀಲ್, ಪದಾಧಿಕಾರಿಗಳಾದ ಚನ್ನಬಸವ ಜೇಕಿನ್,ಮಹಾಂತೇಶ ಅಮರಣ್ಣನವರ್ ಇತರರಿದ್ದರು. 
ಜಿಲ್ಲೆ

ರೈಲು ಯೋಜನೆಗೆ ಅಗತ್ಯ ಅನುದಾನ ನೀಡಲಿ

ಗಂಗಾವತಿ : ವಿವಿಧ ಜಿಲ್ಲೆ ಸಂಪರ್ಕದ ರೈಲು ಯೋಜನೆ ಯನ್ನು ತಾಲೂಕಿಗೂ ವಿಸ್ತರಿಸುವಂತೆ ಒತ್ತಾಯಿಸಿ ರಡ್ಡಿ ಯುವ ಜನ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಸಿಎಂ ಆರ್ಥಿಕ ಸಲಹೆಗಾರ ಬಸವರಾಜರಾಯರಡ್ಡಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಯಲಬುರ್ಗಾ ಶಾಸಕರ ಕಚೇರಿಯಲ್ಲಿ ಭೇಟಿಯಾದ ಸಂಘದ ಪದಾಧಿಕಾರಿಗಳು, ತುರ್ತಾಗಿ ಕೈ ಗೊಳ್ಳಬೇಕಿರುವ ರೈಲು ಯೋಜನೆಗೆ ರಾಜ್ಯಸರ್ಕಾರದ ಹೊಂದಾಣಿಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.

ಸಂಘದ ತಾಲೂಕು ಅಧ್ಯಕ್ಷ ಉಮೇಶ ಎಸ್.ಸಿಂಗನಾಳ್ ಮಾತನಾಡಿ, ದರೋಜಿ, ಗಂಗಾವತಿ ಸಂಪರ್ಕದ ರೈಲು ಯೋಜನೆಗೆ 98ಕೋ.ರೂ.ಗಳ ಅಗತ್ಯವಿದ್ದು, ಸಿಂಧನೂರು ಮತ್ತು ಬೆಂಗಳೂರು ಸಂಪರ್ಕದ ರೈಲು ಯೋಜನೆ ಯನ್ನು ಹಗಲಿನಲ್ಲಿಯೂ ಆರಂಭಿಸಬೇಕು. ಸಿಂಧನೂರು, ಹುಬ್ಬಳ್ಳಿ ರೈಲನ್ನು ಧಾರವಾಡದವರೆಗೂ ವಿಸ್ತರಣೆ, ಬೂದಗುಂಪಾ ಕ್ರಾಸ್‌ನಿಂದ ಬಳ್ಳಾರಿವರೆಗಿನ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವುದು, ಹರಿಹರ ಮಾರ್ಗದ ಬೆಂಗಳೂರು, ಹೊಸಪೇಟೆ ರೈಲನ್ನು ಗಂಗಾವತಿವರಿಗೆ ವಿಸ್ತರಿಸುವುದು ಮತ್ತು ನಗರದ ರೈಲ್ವೆ ಸ್ಟೇಶನ್ ಸಂಪರ್ಕದ ರಸ್ತೆ ದುರಸ್ತಿಗೊಳಿಸುವಂತೆ ಮನವಿ ಮಾಡಿದರು.