ಜಿಲ್ಲೆ

ಸಾರ್ವಜನಿಕ ಶೌಚಗೃಹ ದುರಸ್ತಿ ಕೈಗೊಳ್ಳಿ

ಗಂಗಾವತಿ: ಸಾರ್ವಜನಿಕ ಶೌಚಗೃಹ ದುರಸ್ತಿ ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಾಗರಿಕರ ಹೋರಾಟ ಸಮಿತಿ ಸದಸ್ಯರು ನಗರದ ನಗರಸಭೆ ಮುಂಭಾಗ ಗುರುವಾರ ಪ್ರತಿಭಟಿಸಿದರು.

ಮಹೆಬೂಬ್‌ನಗರದ ನಿವಾಸಿಗಳೊಂದಿಗೆ ಪ್ರತಿಭಟಿಸಿದ ನಂತರ ಬೇಡಿಕೆ ಮನವಿಯನ್ನು ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿಗೆ ಸಲ್ಲಿಸಿದರು. ಸಮಿತಿ ಸಂಚಾಲಕ ಶರಣುಪಾಟೀಲ್ ಮಾತನಾಡಿ, ನಗರದ 7ನೇ ವಾರ್ಡ್ ಮಹೆಬೂಬ್‌ನಗರದಲ್ಲಿ ಮೂರು ಸಾರ್ವಜನಿಕ ಮಹಿಳಾ ಶೌಚಗೃಹಗಳು ಶಿಥಿಲಾವಸ್ಥೆಗೆ ತಲುಪಿದ್ದು, ಬಳಸಲು ಯೋಗ್ಯವಿಲ್ಲ. ದುರಸ್ತಿ ಕೈಗೊಳ್ಳುವುದರ ಜತೆಗೆ ನಿರ್ವಹಣೆ ಜವಾಬ್ದಾರಿವಹಿಸಿಕೊಳ್ಳಬೇಕು. ಅದರಂತೆ ದುರುಗಮ್ಮಹಳ್ಳದ ಕಿರುಸೇತುವೆ ಎರಡು ಭಾಗದಲ್ಲಿ ರಕ್ಷಣಾ ತಂತಿ ಅಳವಡಿಸುವ ಮೂಲಕ ಅನಾಹುತ ತಪ್ಪಿಸಬೇಕು. ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ. ಕೂಡಲೇ ದುರಸ್ತಿ ಕೈಗೊಳ್ಳುವುದರ ಜತೆಗೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದರು. ಸಮಿತಿ ಸದಸ್ಯರಾದ ಮೈನುದ್ದೀನ್, ಖಾಜಾ ಹುಸೇನ್, ಹುಸೇನ್ ಇತರರಿದ್ದರು.