ಗಂಗಾವತಿಯ ಗಾಂಧಿ ವೃತ್ತದ ಬಳಿಯ ಜಾಮಿಯಾ ಮಸೀದಿ ಮುಂದೆ ಮುಸ್ಲಿಮರು ಪ್ರತಿಭಟನೆ ನಡೆಸಿದರು. ಸಮುದಾಯದ ಮುಖಂಡರಾದ ಅಲ್ತ್ಾ ಹುಸೇನ್ ಬಿಚ್ಚುಕತ್ತಿ, ಮುಸ್ತಾ ಕಮಲ್ ಪಾಶಾ, ಮೌಲನಾ ಅ್ಜಲ್‌ಸಾಬ್, ಇಸ್ಮಾಯಿಲ್ ಸಾಬ್ ಇತರರಿದ್ದರು. 
ಜಿಲ್ಲೆ

ಸಮುದಾಯ ಹತ್ತಿಕ್ಕುವ ಸಂಚು

ಶಾಮಸುಂದರ್ ಕೊಪ್ಪಳಕರ್

ಗಂಗಾವತಿ: ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಗಾಂಧಿ ವೃತ್ತದ ಬಳಿಯ ಜಾಮಿಯಾ ಮಸೀದಿ ಮುಂದೆ ಶುಕ್ರವಾರ ಮುಸ್ಲಿಂ ಸಮಾಜದವರು ಮಾನವಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಸಮುದಾಯದ ಮುಖಂಡ ಅಲ್ತ್ಾ ಹುಸೇನ್ ಬಿಚ್ಚುಕತ್ತಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ವಕ್ಫ್ ಬಿಲ್ ಮುಸ್ಲಿಂ ಸಮುದಾಯಕ್ಕೆ ಮಾರಕವಾಗಿದ್ದು, ಸಮುದಾಯವನ್ನು ಹತ್ತಿಕ್ಕುವ ಸಂಚು ನಡೆಸಿದೆ. ದೇಶಾದ್ಯಂತ ಏಕಕಾಲಕ್ಕೆ ಪ್ರತಿಭಟನೆ ನಡೆದಿದ್ದು, ಗಂಗಾವತಿ ತಾಲೂಕಿನಾದ್ಯಂತ ಹೋರಾಟ ನಡೆದಿದೆ. 78 ಒಳಪಂಗಡಗಳು ಮತ್ತು 41ಮಸೀದಿಯ ಮುಖಂಡರು ಭಾಗವಹಿಸಿದ್ದರು. ಅದರೂ ಯಾವ ಪ್ರಯೋಜನೆ ಇಲ್ಲ ಎಂದರು.

ಮುಖಂಡರಾದ ಎಸ್.ಬಿ.ಖಾದ್ರಿ, ಮುಸ್ತಾ ಕಮಲ್ ಪಾಶಾ, ಮೌಲನಾ ಅ್ಜಲ್‌ಸಾಬ್, ಇಸ್ಮಾಯಿಲ್ ಸಾಬ್, ಅಖ್ತರ್ ಅನ್ಸಾರಿ, ಹುಸೇನ್‌ಸಾಬ್, ಗಾರ್ ಚೌದ್ರಿ ಇತರರಿದ್ದರು.