ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಪಂ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ವಿವಿಧ ಯೋಜನೆಗಳ ಮಾಹಿತಿ ಶನಿವಾರ ಪಡೆಯಲಾಯಿತು. ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವೆಂಕಟೇಶಬಾಬು, ಜೆಸ್ಕಾಂ ಎಇಇ ಮಂಜುನಾಥ ಇತರರಿದ್ದರು.  
ಜಿಲ್ಲೆ

ಗ್ರಾಮೀಣರಿಗೆ ಗ್ಯಾರಂಟಿಗಳು ಸಮರ್ಪಕ ತಲುಪಲಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಗ್ಯಾರಂಟಿ ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ಸಮರ್ಪಕ ತಲುಪಬೇಕಿದ್ದು, ನಿರ್ವಹಣೆ ಅಧಿಕಾರಿಗಳು ಲಾನುಭವಿಗಳನ್ನು ಭೇಟಿಯಾಗಿ ಮಾಹಿತಿ ಪಡೆಯುವಂತೆ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವೆಂಕಟೇಶಬಾಬು ಹೇಳಿದರು.

ತಾಲೂಕಿನ ವೆಂಕಟಗಿರಿ ಗ್ರಾಪಂ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ತಾಂತ್ರಿಕ ದೋಷಗಳಿಂದ ಪಡಿತರ ವಿತರಣೆಯಲ್ಲಿ ಲೋಪವಾಗುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ಅನ್ನಭಾಗ್ಯ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗಬಾರದು. ಪಡಿತರ ಅಕ್ಕಿ ಕಳವು ಪ್ರಕರಣಕ್ಕೆ ಕಡಿವಾಣ ಹಾಕಬೇಕಿದ್ದು, ತಪ್ಪಿಸ್ಥರ ವಿರುದ್ಧ ಪ್ರಕರಣ ದಾಖಲಿಸಿ. ಯೋಜನೆ ಅನುಷ್ಠಾನದಲ್ಲಿ ವಿಳಂಬ ಮತ್ತು ತೊಂದರೆಯಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಮಾಹಿತಿ ಪಡೆಯಬೇಕು. ಹೊಸಪೇಟೆಯಲ್ಲಿ ನಡೆಯಲಿರುವ ಸರ್ಕಾರ ಸಾಧನಾ ಸಮಾವೇಶಕ್ಕೆ ಲಾನುಭವಿಗಳನ್ನು ಕರೆದೊಯ್ಯಲು ಪಟ್ಟಿ ತಯಾರಿಸುವಂತೆ ಸಲಹೆ ನೀಡಿದರು. ಬಂಡ್ರಾಳ್ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರು ಮತ್ತು ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಸಮಿತಿ ಸದಸ್ಯರು ಮನವಿ ಮಾಡಿದರು.

ಸಭೆಯಲ್ಲಿ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೊತಿ ಯೋಜನೆಗಳ ಸಾಧಕ, ಬಾಧಕ ಕುರಿತು ಚರ್ಚಿಸಲಾಯಿತು. ಗ್ರಾಪಂ ಅಧ್ಯಕ್ಷೆ ಹನುಮಮ್ಮ ಕಂದಕೂರ್, ವಿಷಯ ನಿರ್ವಾಹಕ ರವೀಂದ್ರ ಕುಲ್ಕರ್ಣಿ, ಜೆಸ್ಕಾಂ ಎಇಇ ಮಂಜುನಾಥ, ಯೋಜನೆ ಇಲಾಖೆ ಪ್ರತಿನಿಧಿಗಳಾದ ಸುಹಾಸ್, ವಿಜಯಲಕ್ಷ್ಮೀ, ಸಮಿತಿ ಸದಸ್ಯರಾದ ಹಮೀದ್ ಮುಲ್ಲಾ, ರಾಮುಕಿರಿಕಿರಿ, ಮುಸ್ತಾಕ್, ದಾವಲ್, ಮಂಜುನಾಥ ಕಲಾಲ್, ಸಬ್ಜಾವಲಿ, ರಾಜಪ್ಪ, ಅಹ್ಮದ್ ಪಟೇಲ್, ಓಂಕಾರಪ್ಪ ಇತರರಿದ್ದರು.