ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ನಾಲ್ಕನೇ ಕವಿ ಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಡಾ.ಜಾಜಿ ದೇವೇಂದ್ರಪ್ಪ ಅವರಿಗೆ ವೇದಿಕೆಯಿಂದ ಸನ್ಮಾನಿಸುವ ಮೂಲಕ ಮಂಗಳವಾರ ಅಧಿಕೃತ ಆಹ್ವಾನ ನೀಡಲಾಯಿತು. ಸಮಿತಿ ಸಂಸ್ಥಾಪಕ ಕೊಟ್ರೇಶ್ ಎಸ್. ಉಪ್ಪಾರ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಶೈಲಜಾ ಹಿರೇಮಠ, ಶರಣಪ್ಪ ತಳ್ಳಿ ಕುಪ್ಪಿಗುಡ್ಡ, ರಮೇಶ ಗಬ್ಬೂರ್ ಇತರರಿದ್ದರು.  
ಜಿಲ್ಲೆ

ಕವಿ ಕಾವ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಿಗೆ ಆಹ್ವಾನ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ನಾಲ್ಕನೇ ಕವಿ ಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಡಾ. ಜಾಜಿ ದೇವೇಂದ್ರಪ್ಪ ಅವರಿಗೆ ಮಂಗಳವಾರ ಅಧಿಕೃತ ಆಹ್ವಾನ ನೀಡಲಾಯಿತು.

ವೇದಿಕೆ ಸ್ಥಳೀಯ ಘಟಕದ ನೆರವಿನೊಂದಿಗೆ ಜ.19ರಂದು ನಗರದ ಶ್ರೀ ಚನ್ನಬಸವೇಶ್ವರ ಕಲಾ ಮಂದಿರದಲ್ಲಿ ಕವಿ ಕಾವ್ಯ ಸಮ್ಮೇಳನ ನಡೆಯಲಿದ್ದು, ಸಾಹಿತಿ ಹಾಗೂ ಸಿಂಧನೂರು ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉದ್ಘಾಟನೆ, ಕೃತಿಗಳ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ, ರಾಜ್ಯಮಟ್ಟದ ಕವಿಗೋಷ್ಠಿ ಮತ್ತು ಸಮಾರೋಪ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ ಕುರಿತು ಸಮಿತಿ ಸಂಸ್ಥಾಪಕ ಕೊಟ್ರೇಶ್ ಎಸ್.ಉಪ್ಪಾರ ಮಾತನಾಡಿ, ಬಸವಾದಿ ಶಿವಶರಣರು, ಕುವೆಂಪು, ವಿವೇಕಾನಂದರ ಚಿಂತನಾ ತತ್ವಗಳಡಿ ಸಮಸಮಾಜದ ಕನಸೊತ್ತು ಏಳೆಂಟು ವರ್ಷಗಳಿಂದ ಎಲೆಮರೆ ಕಾಯಿಯಂತಹ ಸಾಧಕರನ್ನು ಗುರುತಿಸಿ ಸಾಮಾಜಿಕ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ವೇದಿಕೆ ಕಾರ್ಯ ನಿರ್ವಹಿಸುತ್ತಿದ್ದು, ಹೊರ ರಾಜ್ಯಗಳಲ್ಲಿ ಕ್ರಿಯಾಶೀಲ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ವಿಚಾರ, ಕವಿಗೋಷ್ಠಿ, ಕತಿ ವಿಮರ್ಶೆ, ಕತಿ ಲೋಕಾರ್ಪಣೆ ಸೇರಿ ಮೌಲ್ಯಯುತ ಕಾರ್ಯಕ್ರಮ ಆಯೋಜಿಸಿರುವ ಜಾಜಿ ದೇವೇಂದ್ರಪ್ಪ ಆಯ್ಕೆ ಸೂಕ್ತವಾಗಿದೆ. ಇದೇ ಸಂದರ್ಭದಲ್ಲಿ ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ. ಪ್ರಾಣೇಶ, ಸಾಹಿತಿ ನಾಗಭೂಷಣ ಅರಳಿ ಇತರರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಸಾಹಿತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ, ಜಿಲ್ಲಾಧ್ಯಕ್ಷೆ ಅನಸೂಯ ಜಹಗೀರದಾರ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಶೈಲಜಾ ಹಿರೇಮಠ, ರಮೇಶ ಗಬ್ಬೂರು, ಮಹಾದೇವ ಮೋಟಿ, ಯಲ್ಲಪ್ಪ ಕಲಾಲ, ಅಶೋಕ್ ಕುಮಾರ್ ರಾಯ್ಕರ್ ಇತರರಿದ್ದರು.