ಗಂಗಾವತಿ ಶಾರದಾ ನಗರದ ಶ್ರೀ ಶಾರದಾಂಬ ದೇವಾಲಯದಲ್ಲಿ ಸಾಮೂಹಿಕ ಅಕ್ಷರಭ್ಯಾಸ ಮತ್ತು ವಿಶೇಷ ಪೂಜೆ ಸೋಮವಾರ ಜರುಗಿತು. ಪ್ರಧಾನ ಅರ್ಚಕ ಕುಮಾರ ಭಟ್, ಧರ್ಮದರ್ಶಿ ನಾರಾಯಣರಾವ್ ವೈದ್ಯ, ವ್ಯವಸ್ಥಾಪಕ ಅನಿಲ್ ಅಳವಂಡಿಕರ್ ಇತರರಿದ್ದರು.  
ಜಿಲ್ಲೆ

ಮಕ್ಕಳ ಉಜ್ವಲ ಭವಿಷ್ಯಕ್ಕೆ ಅಕ್ಷರಭ್ಯಾಸ ಅವಶ್ಯ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಇಲ್ಲಿನ ಶಾರದಾ ನಗರದ ಶ್ರೀ ಶಾರದಾಂಬ ದೇವಾಲಯದಲ್ಲಿ ಸಾಮೂಹಿಕ ಅಕ್ಷರಭ್ಯಾಸ ಮತ್ತು ವಿಶೇಷ ಪೂಜೆ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಶಂಕರ ಮಠದಿಂದ ಹಮ್ಮಿಕೊಂಡಿದ್ದು, ದೇವಾಲಯದಲ್ಲಿ ಪರಿವಾರದ ದೇವರುಗಳಿಗೆ ವಿಶೇಷ ಪೂಜೆ, ಅಭಿಷೇಕ, ಕುಂಕುಮಾರ್ಚನೆ, ಪಾರಾಯಣ, ಅಕ್ಷರಭ್ಯಾಸದ ಮಹಾಸಂಕಲ್ಪ, ಗಣೇಶ ಮತ್ತು ಶಾರದಾ ಪೂಜೆ, ಮತ್ತು ಭಜನಾ ಸೇವೆ ಜರುಗಿತು.

ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದ ದೇವಾಲಯದ ಪ್ರಧಾನ ಅರ್ಚಕ ಕುಮಾರ ಭಟ್ ಮಾತನಾಡಿ, ಮಕ್ಕಳಿಗೆ ಅಕ್ಷರಭ್ಯಾಸದ ಸಂಪ್ರದಾಯ ಪರಂಪರೆಯಿಂದಲೂ ಚಾಲ್ತಿಯಲ್ಲಿದ್ದು, ಮಕ್ಕಳ ಉತ್ತಮ ಭವಿಷ್ಯಕ್ಕೆ ಕಾರಣವಾಗಲಿದೆ ಎಂದರು.

ದೇವಾಲಯದಲ್ಲಿನ ಧಾರ್ಮಿಕ ಮತ್ತು ಸಮಾಜ ಮುಖಿ ಕಾರ್ಯಕ್ರಮಗಳ ಬಗ್ಗೆ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿದರು. ವ್ಯವಸ್ಥಾಪಕ ಅನಿಲ್ ಅಳವಂಡಿಕರ್, ಮುಖಂಡರಾದ ರಾಘವೇಂದ್ರ ಜೋಶಿ, ಶ್ರೀನಿವಾಸ ಭಟ್ ಕರಮುಡಿ, ಶಿಕ್ಷಕಿ ಕವಿತಾ ದಿಗ್ಗಾವಿ ಇತರರಿದ್ದರು.