ಜಿಲ್ಲೆ

ಭವಿಷ್ಯ ರೂಪಿಸುವ ಶಿಕ್ಷಕರನ್ನು ಗೌರವಿಸಿ

ಗಂಗಾವತಿ: ನಗರದ ಶ್ರೀ ಕೊಟ್ಟೂರೇಶ್ವರ ಪಿಯು ಕಾಲೇಜಿನ ಸಭಾಂಗಣದಲ್ಲಿ ಪ್ರೌಢಶಾಲೆ ವಿಭಾಗ 1998-99ನೇಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಶನಿವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಮಾತನಾಡಿ, ಭವಿಷ್ಯತ್ವ ರೂಪಿಸುವ ಶಾಲೆ ಮತ್ತು ಶಿಕ್ಷಕರನ್ನು ನಿತ್ಯ ಸ್ಮರಿಸಬೇಕಿದ್ದು, ಶೈಕ್ಷಣಿಕ ಬೆಳವಣಿಗೆಗೆ ಹಳೇ ವಿದ್ಯಾರ್ಥಿಗಳು ಶ್ರಮಿಸುವಂತೆ ಸಲಹೆ ನೀಡಿದರು.

ನಿವೃತ್ತ ಮತ್ತು ಹಾಲಿ ಶಿಕ್ಷಕರಿಗೆ ಹಳೇ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಿದರು. ಶಾಲಾ ದಿನಗಳಲ್ಲಿನ ಅನುಭವಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡರಲ್ಲದೇ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಶಾಸಕ ಪರಣ್ಣಮುನವಳ್ಳಿ, ನಿವೃತ್ತ ಶಿಕ್ಷಕರಾದ ಡಿ.ಜಿ.ಮಠದ್, ಸಿ.ಎಚ್.ನಾರಿನಾಳ್, ಮೊಹ್ಮದ್‌ಸಾಬ್, ಶರಭಣ್ಣ, ಶಶಿಧರ, ಶಾಂತಲಾ, ಪ್ರಭಾಕರ, ಹಳೇ ವಿದ್ಯಾರ್ಥಿಗಳ ಪ್ರತಿನಿಧಿ ಎ್.ರಾಘವೇಂದ್ರ ಸೇರಿ ವಿದ್ಯಾರ್ಥಿಗಳಿದರು.