ಗಂಗಾವತಿ ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿಗೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ತಾಲೂಕು ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ವಿ. ಪ್ರಕಾಶ, ಮಾಂತಗೊಂಡ ಬಸವರಾಜ, ನಾಗರಾಜ ಐಲಿ, ವೆಂಕಟೇಶ ಜಾಧವ, ವೆಂಕಟೇಶ, ದಂಡಿನ್ , ಚಂದ್ರಶೇಖರ ನಾಯಕ ಇತರರಿದ್ದರು. 
ಜಿಲ್ಲೆ

ನೆಹರು ಉದ್ಯಾನಕ್ಕೆ ರಕ್ಷಣಾ ಬೇಲಿ ಅಳವಡಿಸಿ

ಶಾಮಸುಂದರ್ ಕೊಪ್ಪಳಕರ್

ಗಂಗಾವತಿ: ನಗರದ ಬಸ್ ನಿಲ್ದಾಣದ ಎದುರಿಗಿನ ನೆಹರು ಉದ್ಯಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ತಾಲೂಕು ಸಮಿತಿ ಸದಸ್ಯರು ನಗರಸಭೆ ಮುಂದೆ ಪ್ರತಿಭಟಿಸಿ, ಪೌರಾಯುಕ್ತ ಆರ್.ವಿರೂಪಾಕ್ಷ ಮೂರ್ತಿಗೆ ಭಾನುವಾರ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಚಂದ್ರಶೇಖರ ಶ್ರೇಷ್ಠಿ ಮಾತನಾಡಿ, ಉದ್ಯಾನದಲ್ಲಿ ಸ್ವಚ್ಛತೆ ಮಾಯವಾಗಿದ್ದು, ಮದ್ಯಪಾನ ಮತ್ತು ಅನೈತಿಕ ಚಟುವಟಿಕೆಯ ತಾಣವಾಗಿದೆ. ಸಾರ್ವಜನಿಕರು ಮತ್ತು ಬೇರೆ ಬೇರೆ ಊರಿಗೆ ಹೋಗುವ ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಅವಕಾಶವಿಲ್ಲದಂತಾಗಿದೆ. ವಾಯು ವಿಹಾರ, ವ್ಯಾಯಾಮಕ್ಕೆ ಬರುವವರಿಗೆ ಸ್ವಚ್ಛತೆಯಿಲ್ಲದಂತಾಗಿದೆ. ಮಕ್ಕಳಿಗಾಗಿ ಹಾಕಲಾದ ಎಲ್ಲಾ ಸಾಮಾಗ್ರಿಗಳು ಸಂಪೂರ್ಣ ದುರಸ್ತಿಗೆ ಬಂದಿವೆ. ಕುಡುಕರ ಹಾವಳಿ ಮತ್ತು ಅನೈತಿಕ ಚಟುವಟಿಕೆ ಹೆಚ್ಚಾಗಿದೆ. ನಿರ್ವಹಣೆ ಕೊರತೆಯಿಂದ ಉದ್ಯಾನ ಹಾಳಾಗಿದೆ. ಅಭಿವೃದ್ಧಿ ಜತೆಗೆ ಉದ್ಯಾನ ಸುತ್ತಲೂ ರಕ್ಷಣಾ ಬೇಲಿ ಹಾಕುವಂತೆ ಒತ್ತಾಯಿಸಿದರು.