ಗಂಗಾವತಿ ಅಬಕಾರಿ ಕಚೇರಿ ಪಿಐ ವಿಠ್ಠಲ ಪೀರಗಣ್ಣನವರ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ತಾಲೂಕು ಸಮಿತಿ ಸದಸ್ಯರು ಗುರುವಾರ ಮನವಿ ಸಲ್ಲಿಸಿದರು. ಸಮಿತಿ ತಾಲೂಕಾಧ್ಯಕ್ಷ ಯಮನೂರ್ ಭಟ್, ಪದಾಧಿಕಾರಿಗಳಾದ ಆರೇಗರ್ ಕೊಟ್ರೇಶ, ರಮೇಶ್ ಕುಮಾರ ಇತರರಿದ್ದರು. 
ಜಿಲ್ಲೆ

ಕನಕಗಿರಿ ಜಾತ್ರೆಯಲ್ಲಿ ಮದ್ಯ ಮಾರಾಟ ಬೇಡ

ಗಂಗಾವತಿ: ಕನಕಗಿರಿಯ ಕನಕಾಚಲಪತಿ ಜಾತ್ರೆಯಲ್ಲಿ ಮದ್ಯಮಾರಾಟ ಬಂದ್ ಮಾಡಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ತಾಲೂಕು ಸಮಿತಿ ಸದಸ್ಯರು ನಗರದ ಅಬಕಾರಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.

ಕನಕಗಿರಿಯಲ್ಲಿ ಮಾ.20, 21ರಂದು ಕನಕಾಚಲಪತಿ ಜಾತ್ರೆ ಜರುಗಲಿದ್ದು, ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಲಿದ್ದಾರೆ. ದೇವಾಲಯದ ಸನಿಹದಲ್ಲಿ ಮದ್ಯದಂಗಡಿಗಳಿದ್ದು, ಪಾವಿತ್ರೃಕ್ಕೆ ಧಕ್ಕೆಯಾಗಲಿದೆ. ದೇವಾಲಯ, ಐತಿಹಾಸಿಕ ಸ್ಮಾರಕಗಳ ಬಳಿ ಕೆಲ ಕಿಡಿಗೇಡಿಗಳು ಮದ್ಯಸೇವನೆ ಮೂಲಕ ಪರಿಸರ ಹಾಳು ಮಾಡಲಿದ್ದಾರೆ. ಮದ್ಯ ಮಾರಾಟವನ್ನು ವಾರದಿಂದಲೇ ಬಂದ್ ಮಾಡಬೇಕಿದ್ದು, ಅಕ್ರಮ ಮಾರಾಟಕ್ಕೂ ಕಡಿವಾಣ ಹಾಕಬೇಕು ಎಂದು ಸಮಿತಿ ತಾಲೂಕಾಧ್ಯಕ್ಷ ಯಮನೂರ್ ಭಟ್ ಒತ್ತಾಯಿಸಿದರು.

ಅಬಕಾರಿ ಪಿಐ ವಿಠ್ಠಲ ಪೀರಗಣ್ಣನವ್‌ಗೆ ಮನವಿ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್‌ಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಆರೇಗರ್ ಕೊಟ್ರೇಶ, ರಮೇಶ್ ಕುಮಾರ, ಯಲ್ಲಪ್ಪ, ರಮೇಶ, ಯಮನೂರ, ಕಲ್ಲಪ್ಪ ಇತರರಿದ್ದರು.