ಗಂಗಾವತಿ ಜೆ ಎಂ ಎಫ್ ಸಿ ಕೋರ್ಟ್‌ಗೆ ಭೇಟಿ ನೀಡಿದ ಸೇಂಟ್ ಪಾಲ್ಸ್ ಶಾಲೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಾಲೂಕು ವಕೀಲ ಸಂಘದ ಕಾರ್ಯದರ್ಶಿ ಎಚ್.ಎಂ. ಮಂಜುನಾಥ ಬುಧವಾರ ಮಾತನಾಡಿದರು. ತಾಲೂಕಾಧ್ಯಕ್ಷ ಎಸ್.ಎನ್.ನಾಯಕ, ಶಾಲಾ ಆಡಳಿತಾಧಿಕಾರಿ ಕೃತಿಕಾ ವಸ್ತ್ರದ್, ಪ್ರಾಚಾರ್ಯೆ ಜಯವೈದ್ಯ, ಉಪ ಪ್ರಾಚಾರ್ಯ ಜಿ.ಎಂ.ಸಿದ್ದೇಶ, ಶಿಕ್ಷಕರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳಿಂದ ಕಲಾಪ ವೀಕ್ಷಣೆ

ಗಂಗಾವತಿ: ನಗರದ ಜೆಎಂಎ್ಸಿ ಕೋರ್ಟ್‌ಗೆ ಸೇಂಟ್ ಪಾಲ್ಸ್ ಶಾಲೆ ವಿದ್ಯಾರ್ಥಿಗಳು ಬುಧವಾರ ಭೇಟಿ ನೀಡಿ, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.

ಕಾನೂನು ಅರಿವು ಮತ್ತು ಸಾಮಾನ್ಯ ಜ್ಞಾನ ಮಕ್ಕಳಲ್ಲಿ ಹೆಚ್ಚಿಸುವುದಕ್ಕಾಗಿ ಶಾಲಾಡಳಿತ ಮಂಡಳಿ ಕೋರ್ಟ್‌ಗೆ ಶೈಕ್ಷಣಿಕ ಭೇಟಿ ವ್ಯವಸ್ಥೆ ಮಾಡಿದ್ದು, ಇದಕ್ಕೆ ವಕೀಲರ ಸಂಘ ಸಾಥ್ ನೀಡಿತು. ಕೋರ್ಟ್ ಆವರಣದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ, ಪ್ರಧಾನ ಸಿವಿಲ್, ಹಿರಿಯ ಶ್ರೇಣಿ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯ ವೀಕ್ಷಿಸಿದ ವಿದ್ಯಾರ್ಥಿಗಳು, ಅಲ್ಲಿನ ನೇರ ಕಲಾಪಗಳನ್ನು ವೀಕ್ಷಿಸಿದರು.

ನ್ಯಾಯಾಲಯ ವ್ಯವಸ್ಥೆ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಯಲ್ಲಿ ಕಾನೂನುಗಳ ಮಹತ್ವ ಕುರಿತು ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಮಾತನಾಡಿದರು. ಸಂಘದ ತಾಲೂಕಾಧ್ಯಕ್ಷ ಎಸ್.ಎನ್.ನಾಯಕ, ಶಾಲಾ ಆಡಳಿತಾಧಿಕಾರಿ ಕೃತಿಕಾ ವಸ್ತ್ರದ್, ಪ್ರಾಚಾರ್ಯೆ ಜಯವೈದ್ಯ, ಉಪ ಪ್ರಾಚಾರ್ಯ ಜಿ.ಎಂ.ಸಿದ್ದೇಶ, ಶಿಕ್ಷಕರಿದ್ದರು.