ಗಂಗಾವತಿ ಎಂಎನ್‌ಎಂ ಸ.ಬಾ.ಪೂ.ಕಾಲೇಜಿನಲ್ಲಿ ಇಂಟ್ರಾಕ್ಟ್ ಕ್ಲಬ್ ಉದ್ಘಾಟನೆ ವೇಳೆ ಶಾಲಾಮಕ್ಕಳಿಗೆ ನೋಟ್‌ಬುಕ್‌ಗಳನ್ನು ಸೋಮವಾರ ಉಚಿತ ವಿತರಿಸಲಾಯಿತು. ರೋಟರಿ ಕ್ಲಬ್ ತಾಲೂಕಾಧ್ಯಕ್ಷ ಟಿ.ಆಂಜನೇಯ, ಕಾರ್ಯದರ್ಶಿ ವಾಸುಕೊಳಗದ್, ವಿಜಯನಗರ ವಲಯ ಸಹಾಯಕ ಪಾಲಕ ಮಹೇಶ ಸಾಗರ್ ಇತರರಿದ್ದರು.  
ಜಿಲ್ಲೆ

ಸಾಮಾಜಿಕ ಚಟುವಟಿಕೆಗಳಿಗೆ ಆದ್ಯತೆ

ಗಂಗಾವತಿ: ವಿದ್ಯಾರ್ಥಿ ದೆಸೆಯಲ್ಲಿ ಕೌಶಲಾಭಿವೃದ್ಧಿ ಮತ್ತು ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಂಟ್ರಾಕ್ಟ್ ಕ್ಲಬ್ ಸ್ಥಾಪಿಸಲಾಗಿದೆ ಎಂದು ರೋಟರಿ ಕ್ಲಬ್ ತಾಲೂಕಾಧ್ಯಕ್ಷ ಟಿ.ಆಂಜನೇಯ ಹೇಳಿದರು.

ನಗರದ ಎಂಎನ್‌ಎಂ ಸ.ಬಾ.ಪೂ.ಕಾಲೇಜಿನಲ್ಲಿ ರೋಟರಿ ಕ್ಲಬ್‌ನಿಂದ ಸೋಮವಾರ ಹಮ್ಮಿಕೊಂಡಿದ್ದ ಇಂಟ್ರಾಕ್ಟ್ ಕ್ಲಬ್ ಉದ್ಘಾಟಿಸಿ ಮಾತನಾಡಿದರು. ಕ್ಲಬ್ ಪ್ರಸಕ್ತ ಸಾಲಿನಲ್ಲಿ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಸಾಮಾಜಿಕ, ಆರೋಗ್ಯ, ಶಿಕ್ಷಣ, ಆರ್ಥಿಕ ಅಭಿವದ್ಧಿಯಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಸ್ವಾಸ್ಥೃ ಆರೋಗ್ಯ, ಶಾಂತಿ ಸ್ಥಾಪನೆ, ಸಾಮಾಜಿಕ ಕಳಕಳಿಯ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ ಎಂದರು.

ವಿಜಯನಗರ ವಲಯ ಸಹಾಯಕ ಪಾಲಕ ಮಹೇಶ ಸಾಗರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿನ ಮಕ್ಕಳನ್ನು ವಿವಿಧ ತರಬೇತಿ ಮೂಲಕ ಮುಖ್ಯವಾಹಿನಿಗೆ ತರಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನೋಟ್‌ಬುಕ್‌ಗಳನ್ನು ಉಚಿತ ವಿತರಿಸಲಾಯಿತು.

ಪ್ರಾಚಾರ್ಯ ಟಿ.ಸಿ.ಶಾಂತಪ್ಪ, ಶಿಕ್ಷಕರಾದ ಸಿದ್ದಲಿಂಗೇಶ ಪೂಲಬಾವಿ, ರಾಜೇಶ್ವರ ರೆಡ್ಡಿ, ಕ್ಲಬ್ ಕಾರ್ಯದರ್ಶಿ ವಾಸುಕೊಳಗದ್, ಪದಾಧಿಕಾರಿಗಳಾದ ಎಂ.ರಾಘವೇಂದ್ರರಾವ್, ಎಚ್.ಎಂ.ಮಂಜುನಾಥ, ಪ್ರಕಾಶ್ ಛೋಪ್ರಾ, ಜೆ.ನಾಗರಾಜ, ಶ್ರೀಧರ್ ನಾಯಕ, ಸಲಾಹುದ್ದೀನ್ ಸುರಪುರ, ಎ.ಜಗದೀಶ್, ಸುರೇಶ ಜೈನ, ಹುಡೇದ ಮಂಜುನಾಥ ಇತರರಿದ್ದರು. ನಂತರ ಇಸ್ಲಾಂಪುರದ ಹಮಾಲರ ಕಾಲನಿಯ ಸ.ಹಿ.ಪ್ರಾ.ಶಾಲೆಯಲ್ಲೂ ಕ್ಲಬ್ ಸ್ಥಾಪಿಸಲಾಯಿತು.