ಗಂಗಾವತಿ ತಾಲೂಕಿನ ಹೊಸ್ಕೇರಾ ಗ್ರಾಪಂ ವ್ಯಾಪ್ತಿಯ ಕೋಟಯ್ಯ ಕ್ಯಾಂಪ್‌ನಲ್ಲಿ ಹಮ್ಮಿಕೊಂಡಿದ್ದ ದುಡಿಯೋಣ ಬಾ, ಸೀ ಚೇತನ ಅಭಿಯಾನದಲ್ಲಿ ಯೋಜನೆಯ ಕರಪತ್ರಗಳನ್ನು ವಿತರಿಸಲಾಯಿತು. ಐಇಸಿ ತಾಲೂಕು ಸಂಯೋಜ ಬಾಳಪ್ಪ ತಾಳಕೇರಿ, ತಾಂತ್ರಿಕ ಸಹಾಯಕ ಶರಣಯ್ಯ, ಗ್ರಾಪಂ ಕಾರ್ಯದರ್ಶಿ ವಿರೂಪಾಕ್ಷಯ್ಯಸ್ವಾಮಿ ಇತರರಿದ್ದರು. 
ಜಿಲ್ಲೆ

ಮಹಿಳೆಯರ ಪ್ರೋತ್ಸಾಹಕ್ಕೆ ಸೀಚೇತನ ಸಹಕಾರಿ

ಗಂಗಾವತಿ: ತಾಲೂಕಿನ ಹೊಸ್ಕೇರಾದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ದುಡಿಯೋಣ ಬಾ ಮತ್ತು ಸೀಚೇತನ ಅಭಿಯಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಹೊಸ್ಕೇರಾ ಗ್ರಾಪಂನಿಂದ ಗ್ರಾಮದ ಆಂಜನೇಯ ದೇವಾಲಯ ಬಳಿ ಸಭೆ ನಡೆಸಿದ ಗ್ರಾಪಂ ಸಿಬ್ಬಂದಿ, ಯೋಜನೆಯ ಕರಪತ್ರ ಗಳನ್ನು ವಿತರಿಸಿದರು.

ಐಇಸಿ ತಾಲೂಕು ಸಂಯೋಜಕ ಬಾಳಪ್ಪ ತಾಳಕೇರಿ ಮಾತನಾಡಿ, ಬೇಸಿಗೆ ಹಿನ್ನೆಲೆಯಲ್ಲಿ ದುಡಿಯೋಣ ಬಾ ಅಭಿಯಾನ ಶುರುವಾಗಿದ್ದು, ಕೂಲಿಕಾರರಿಗೆ ನಿರಂತರ ಕೆಲಸ ನೀಡಲಾಗುತ್ತಿದೆ. ಜತೆಗೆ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ ಕೈಗೊಳ್ಳಲಾಗಿದೆ. ಗ್ರಾಪಂಗೆ ನಮೂನೆ 6 ಸಲ್ಲಿಸಿ ಕೆಲಸ ಪಡೆಯಬೇಕು. ವರ್ಷಕ್ಕೆ 100 ಮಾನವ ದಿನಗಳ ಅವಕಾಶವಿದೆ. ವದ್ಧರು, ಅಂಗವಿಕಲರು, ಗರ್ಭಿಣಿಯರು, ಬಾಣಂತಿಯರಿಗೆ ಕೆಲಸದಲ್ಲಿ ರಿಯಾಯಿತಿ ಸೌಲಭ್ಯವಿದೆ. ಮೇ ತಿಂಗಳ ಬೇಸಿಗೆ ಅವಧಿಯಲ್ಲಿ ಕೆಲಸದಲ್ಲಿ ಶೇ.30 ವಿನಾಯತಿಯಿದೆ.

ಮಾಹಿತಿಗೆ ಏಕೀಕೃತ ಸಹಾಯವಾಣಿ ಸೌಲಭ್ಯವಿದೆ ಎಂದರು. ತಾಂತ್ರಿಕ ಸಹಾಯಕ ಶರಣಯ್ಯ, ಗ್ರಾಪಂ ಕಾರ್ಯದರ್ಶಿ ವಿರೂಪಾಕ್ಷಯ್ಯಸ್ವಾಮಿ, ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆ ಕಷಿ ತಾಲೂಕು ವ್ಯವಸ್ಥಾಪಕ ಮುದ್ದಾನೇಶ, ತಾಪಂ ನರೇಗಾ ಡಿಇಒ ಹನುಮೇಶ, ವಿಷಯ ನಿವಾರ್ಹಕರಾದ ದೊಡ್ಡಬಸವ, ಲಕ್ಷ್ಮಣ, ಮಲ್ಲಿಕಾರ್ಜುನ, ಮಂಜುನಾಥ, ಮಂಜುನಾಥ, ಕಾಯಕ ಮಿತ್ರರಾದ ಮಲ್ಲಮ್ಮ, ಸಂಜೀವಿನಿ ಯೋಜನೆ ಪ್ರತಿನಿಧಿಗಳಾದ ದಾಕ್ಷಾಯಿಣಿ, ಅನಿತಾ, ಅನಂತ ಲಕ್ಷ್ಮೀ, ಪಶುಸಖಿ ಜ್ಯೋತಿ, ಸ್ವಸಹಾಯ ಸಂಘದ ಸದಸ್ಯರಿದ್ದರು. ಇದೇ ಸಂದರ್ಭದಲ್ಲಿ ಕೋಟಯ್ಯಕ್ಯಾಂಪ್‌ನಲ್ಲೂ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.