ಗಂಗಾವತಿ ಹಿರೇಜಂತಕಲ್ ಸ.ಹಿ.ಪ್ರಾ.ಶಾಲೆ ಮುಂಭಾಗದಲ್ಲಿ ವಿಐಪಿ ಮೆಲೋಡಿಸ್ ಹಮ್ಮಿಕೊಂಡಿದ್ದ ಜಾಗರಣೆಯ ಭಕ್ತಿ ರಸಮಂಜರಿ ಕಾರ್ಯಕ್ರಮವನ್ನು ನಗರಸಭೆ ಸದಸ್ಯೆ ಹುಲಿಗೆಮ್ಮ ಕಿರಿಕಿರಿ ಬುಧವಾರ ರಾತ್ರಿ ಉದ್ಘಾಟಿಸಿದರು. ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ್, ಗಾಯಕರಾದ ಪಂಪಾಪತಿ ಇಂಗಳಗಿ, ಮಧುಶ್ರೀ ಗದಗ ಇತರರಿದ್ದರು.  
ಜಿಲ್ಲೆ

ಭಕ್ತಿ ಪ್ರಧಾನ ಗೀತೆಗಳ ಗಾಯಕ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ಹಿರೇಜಂತಕಲ್ ಸ.ಹಿ.ಪ್ರಾ.ಶಾಲೆ ಮುಂಭಾಗದಲ್ಲಿ ಜಾಗರಣೆಯ ಭಕ್ತಿ ರಸಮಂಜರಿ ಕಾರ್ಯಕ್ರಮ ಬುಧವಾರ ರಾತ್ರಿ ಹಮ್ಮಿಕೊಳ್ಳಲಾಗಿತ್ತು.

ವಿಐಟಿ ಮೆಲೋಡಿಸ್ ತಂಡದಿಂದ ಹಮ್ಮಿಕೊಂಡಿದ್ದು, ಕನ್ನಡ ಸೇರಿ ವಿವಿಧ ಭಾಷೆಯ ಭಕ್ತಿ ಪ್ರಧಾನ ಗೀತೆಗಳನ್ನು ಗಾಯಕ ಪಂಪಾಪತಿ ಇಂಗಳಗಿ ನೇತೃತ್ವದ ಕಲಾವಿದರು ಪ್ರಸ್ತುತಪಡಿಸಿದರು. ಕಾರ್ಯಕ್ರಮ ಕುರಿತು ನಗರಸಭೆ ಸದಸ್ಯೆ ಹುಲಿಗೆಮ್ಮಕಿರಿಕಿರಿ, ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ್ ಮಾತನಾಡಿದರು. ಮುಖಂಡರಾದ ವೆಂಕಟೇಶ ಮಾನಳ್ಳಿ, ಪರಮಾನಂದ ಜ್ಯೋತಿ, ಲೊಕೇಶಪ್ಪ ವಡ್ಡರ್, ನಾಗರಾಜ್ ಗುಗ್ಗರಿ, ರಾಮಣ್ಣ ಗೊಟೂರು, ಕಲಾವಿದರಾದ ಮಧುಶ್ರೀ ಗದಗ, ಮಹೇಬೂಬ್ ಮಣ್ಣೂರ್, ರಾಘವೇಂದ್ರ ಈಡಿಗ, ಚಂದ್ರು ಕೆಂಗೇರಿ, ದಾಕ್ಷಾಯಿಣಿ, ಬೆಟ್ಟದಪ್ಪ ಇತರರಿದ್ದರು.

ಪಂಪಾನಗರ: ಇಲ್ಲಿನ ರಾಂಪುರಪೇಟೆಯ ಶ್ರೀ ಪ್ರಸನ್ನ ಪಂಪಾಪತಿ ದೇವಾಲಯದಲ್ಲಿ ಶಿವರಾತ್ರಿ ನಿಮಿತ್ತ ವಿಶೇಷ ಪೂಜೆ ಮತ್ತು ಜಾಗರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೂರ್ತಿಗೆ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಶಿವಸ್ತುತಿ ಪಾರಾಯಣ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ದೇವಾಲಯದ ಮುಖ್ಯಸ್ಥ ಪ್ರಸನ್ನ ರಾಂಭಟ್ ಜೋಶಿ, ನಗರಸಭೆ ಸದಸ್ಯ ವಾಸುದೇವ ನವಲಿ ಇತರರಿದ್ದರು. ಇದಲ್ಲದೆ ತಾಲೂಕಿನ ಢಣಾಪುರದ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಹೂವಿನಿಂದ ಅಲಂಕಾರ, ಹೇರೂರಿನ ಈಶ್ವರ ದೇವರಿಗೆ ವಿಶೇಷ ಪೂಜೆ, ಮಡಿತೇರು ನೆರವೇರಿಸಲಾಯಿತು. ಮಾಜಿ ಶಾಸಕ ಪರಣ್ಣಮುನವಳ್ಳಿ, ಮುಖಂಡರಾದ ಅಯ್ಯನಗೌಡ, ಪಂಪಣ್ಣ ಚಕೋಟಿ, ಬಸಯ್ಯಸ್ವಾಮಿ, ಶಶಿಧರಗೌಡ, ಅಕ್ಕಿ ಚಂದ್ರಶೇಖರ್, ಅಮರೇಶಪ್ಪ, ಚಂದ್ರಶೇಖರ್ ಗೋನಾಳ್, ಮುದ್ದನಗೌಡ ಮಾಲಿ ಪಾಟೀಲ್ ಇತರರಿದ್ದರು.