ಜಿಲ್ಲೆ

ಅಂಜನಾದ್ರಿ ಹುಂಡಿಯಲ್ಲಿ 63.10 ಲಕ್ಷ ರೂ. ಸಂಗ್ರಹ

ಪ್ರವೀಣ ಉದುಸಾ ದಲಬಂಜನ್

ಗಂಗಾವತಿ: ತಾಲೂಕಿನ ಹನುಮನಹಳ್ಳಿಯ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟದ ಹುಂಡಿಗಳನ್ನು ಬುಧವಾರ ಎಣಿಕೆ ಮಾಡಲಾಗಿದ್ದು, ಒಂದು ತಿಂಗಳಲ್ಲಿ 63.10 ಲಕ್ಷ ರೂ. ಸಂಗ್ರಹವಾಗಿರುವುದು ದಾಖಲೆಯಾಗಿದೆ.

ಅಂಜನಾದ್ರಿ ಬೆಟ್ಟದಲ್ಲಿ ತಿಂಗಳಿಗೊಮ್ಮೆ ಹುಂಡಿ ತೆರೆಯಲಾಗುತ್ತಿದೆ. ಕಂದಾಯ ಮತ್ತು ಮುಜರಾಯಿ ಇಲಾಖೆಯಿಂದ ಪೊಲೀಸ್ ಬಂದೋಬಸ್ತ್ ಮತ್ತು ಸಿಸಿ ಕ್ಯಾಮರಾದ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ನಡೆಯಿತು. ದೇವಾಲಯದಲ್ಲಿದ್ದ 11 ಹುಂಡಿಗಳ ಒಟ್ಟು 63,10, 581 ರೂ. ಸಂಗ್ರಹವಾಗಿದ್ದು, ಎಣಿಕೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಸಂಗ್ರಹಿತ ಹಣವನ್ನು ಸಣಾಪುರದ ಪಿಕೆಜಿಬಿಯಲ್ಲಿ ಜಮೆ ಮಾಡಲಾಯಿತು.

ದೇವಾಲಯದ ಸಿಇಒ ಎಂ.ಎಚ್. ಪ್ರಕಾಶರಾವ್, ಪಿಕೆಜಿಬಿ ಪ್ರತಿನಿಧಿ ನವೀನ್‌ಕುಮಾರ, ಪೊಲೀಸ್ ಪೇದೆ ಕಾಳಿಂಗ ಸೇರಿ ದೇವಾಲಯದ ಸಿಬ್ಬಂದಿ ಮತ್ತು ಭಕ್ತರಿದ್ದರು.