ಗಂಗಾವತಿ ಸ.ಮಾ.ಹಿ.ಪ್ರಾಥಮಿಕ (ಪ್ರಾಪರ್)ಶಾಲೆಯಲ್ಲಿ 1998-99 ನೇ ಸಾಲಿನ ಹಳೇ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ಬಿಇಒ ಎಚ್.ಬಿ.ನಟೇಶ ಸೋಮವಾರ ಉದ್ಘಾಟಿಸಿದರು.ಎಸ್ಡಿಎಂಸಿ ಅಧ್ಯಕ್ಷ ಈರೇಶ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ವಸದ್, ಅಕ್ಷರ ದಾಸೋಹ ನಿರ್ದೇಶಕ ರೋಷಣ್ಣ ಇತರರಿದ್ದರು.  
ಜಿಲ್ಲೆ

ಶಾಲಾ ಅಭಿವೃದ್ಧಿಗೆ ಕೈ ಜೋಡಿಸಿ, ಹಳೇ ವಿದ್ಯಾರ್ಥಿಗಳಿಗೆ ಬಿಇಒ ಎಚ್.ಬಿ.ನಟೇಶ ಸಲಹೆ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಶತಮಾನೋತ್ಸವ ಕಂಡ ಸರ್ಕಾರಿ ಶಾಲಾಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು ಕೈ ಜೋಡಿಸಲಿ ಎಂದು ಬಿಇಒ ಎಚ್.ಬಿ.ನಟೇಶ ಹೇಳಿದರು.

ನಗರದ ಸ.ಮಾ.ಹಿ.ಪ್ರಾಥಮಿಕ (ಪ್ರಾಪರ್)ಶಾಲೆಯಲ್ಲಿ 1998-99 ನೇ ಸಾಲಿನ ಹಳೇ ವಿದ್ಯಾರ್ಥಿಗಳು ಸೋಮವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರದ ಶಾಲೆ 120 ವರ್ಷಗಳನ್ನು ಪೂರೈಸಿದ್ದು, ಇಲ್ಲಿ ಅಭ್ಯಸಿಸಿದವರು ಹಲವರು ಉನ್ನತ ಸ್ಥಾನದಲ್ಲಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಹೊಸ ಮತ್ತು ಹಳೇ ಶಿಕ್ಷಕರನ್ನು ಒಗ್ಗೂಡಿಸಿರುವುದು ಪ್ರಶಂಸನೀಯ ಎಂದರು.

ಶಾಲಾಭಿವೃದ್ಧಿ ಕುರಿತು ಅಧ್ಯಕ್ಷತೆವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಈರೇಶ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಪಂಪಣ್ಣ, ವಿಷ್ಣುತೀರ್ಥ ದಿಗ್ಗಾವಿ, ಚನ್ನಮ್ಮ, ಮೇರಿ, ಕಷ್ಣವೇಣಿ, ಸುನಂದ, ಭಾರತಿಬಾಯಿ, ರುದ್ರಯ್ಯಸ್ವಾಮಿ ಆರ‌್ಹಾಳ, ಹನುಮಂತಾಚಾರ್, ನೀಲಮ್ಮ ಚನ್ನಬಸಪ್ಪ ಇತರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ವಸದ್, ಅಕ್ಷರ ದಾಸೋಹ ನಿರ್ದೇಶಕ ರೋಷಣ್ಣ, ಶಿಕ್ಷಣ ಸಂಯೋಜಕ ಆನಂದ ನಾಗಮ್ಮನವರ್, ಬಿಆರ್‌ಪಿ ಜೆ.ಶಶಿಕಲಾ, ಸಿಆರ್‌ಪಿ ಶಿವಪ್ರಸಾದ ಇತರರಿದ್ದರು.