ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯರು ಗಂಗಾವತಿ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಪದಾಧಿಕಾರಿಗಳಾದ ಕೆ.ಹುಸೇನಪ್ಪ, ಬಾಳಪ್ಪ ಹುಲಿಹೈದರ್, ಮರಿನಾಗಪ್ಪ, ಮಂಜುನಾಥ ಡಗ್ಗಿ ಇತರರಿದ್ದರು.  
ಜಿಲ್ಲೆ

ಬಸ್ ಪ್ರಯಾಣ ದರ ಇಳಿಕೆಯಾಗಲಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಸೋಮವಾರ ಪಕ್ಷದ ಅಂಗ ಸಂಘಟನೆಪದಾಧಿಕಾರಿಗಳೊಂದಿಗೆ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ಬಡ ಮತ್ತು ಮಧ್ಯಮವರ್ಗದವರೇ ಸರ್ಕಾರಿ ಬಸ್ ಅವಲಂಬಿಸಿದ್ದು, ಶೇ.15 ದರ ಹೆಚ್ಚಿಸಿರುವುದು ಸರಿಯಲ್ಲ. ಅದರೊಂದಿಗೆ ಸರಕು ಸಾಗಣೆ ದರವನ್ನು ಹೆಚ್ಚಿಸಿರುವುದು ಖಂಡನೀಯ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ದರ ಹೆಚ್ಚಳದೊಂದಿಗೆ ಹಿಂದುಳಿದ, ಮಧ್ಯಮ ಮತ್ತು ದಲಿತ ವರ್ಗದ ಜನ ವಿರೋಧಿ ನೀತಿ ಅನುಸರಿಲಾಗುತ್ತಿದೆ. ಈ ಬಗ್ಗೆ ಪುನರ್ ಪರಿಶೀಲಿಸಬೇಕಿದ್ದು, ಕೂಡಲೇ ದರ ಏರಿಕೆ ಹಿಂಪಡೆಯುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಕೆ.ಹುಸೇನಪ್ಪ, ಬಾಳಪ್ಪ ಹುಲಿಹೈದರ್, ಮರಿನಾಗಪ್ಪ, ಮಂಜುನಾಥ ಡಗ್ಗಿ, ಶಿವಣ್ಣ ಬೆಣಕಲ್, ಗಾದೆಪ್ಪ, ಮುತ್ತಣ್ಣ, ಹುಲಿಗೆಮ್ಮ, ಬಸವರಾಜ ಆನೆಗೊಂದಿ, ರವಿ ಅಕ್ಕಿರೊಟ್ಟಿ, ಎ.ರಮೇಶ, ಕೃಷ್ಣಪ್ಪ ಇತರರಿದ್ದರು.