ಗಂಗಾವತಿ ಬಾಲಕಿಯರ ಸ.ಹಿ.ಪ್ರಾ. ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕಾಡಳಿತ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮವನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಶನಿವಾರ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಸದಸ್ಯ ಸೋಮನಾಥ ಇತರರಿದ್ದರು. 
ಜಿಲ್ಲೆ

ಭದ್ರತೆ ಒದಗಿಸಿದ ಧೀಮಂತ

ಗಂಗಾವತಿ: ದೇಶದ ಆರ್ಥಿಕ ಮತ್ತು ಭದ್ರತೆ ವಿಚಾರದಲ್ಲಿ ಶ್ರೇಷ್ಠ ರಾಜಕಾರಣಿಗಳ ಸಾಲಿನಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಪ್ರಮುಖರು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ನಗರದ ಬಾಲಕಿಯರ ಸ.ಹಿ.ಪ್ರಾ. ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ದೂರದೃಷ್ಟಿ ರಾಜಕಾರಣದಿಂದ ದೇಶದ ಆಹಾರ ಭದ್ರತೆ ಹೆಚ್ಚಾಗಿದ್ದು, ದೇಶದಲ್ಲಿ ಕಾಂಗ್ರೆಸೇತ್ತರ ಅಧಿಕಾರ ತರಲು ಬಾಬುಜಗಜೀವನರಾಮ್ ಒಬ್ಬರು. ದೇಶದ ಹಿತಕ್ಕಾಗಿ ಬಾಬೂಜಿ ತಮ್ಮ ಆಡಳಿತಾವಧಿಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿರುವುದು ಇಂದಿಗೂ ಮಾದರಿಯಾಗಿದೆ ಎಂದರು. ಮರಿಯಮ್ಮನಹಳ್ಳಿ ಪಿಯು ಕಾಲೇಜಿನ ಉಪನ್ಯಾಸಕ ಡಾ.ಎಸ್.ಬಿ.ಚಂದ್ರಶೇಖರ್, ಉಪನ್ಯಾಸ ನೀಡಿದರು.

ಅದ್ದೂರಿ ಮೆರವಣಿಗೆ

ಕಾರ್ಯಕ್ರಮಕ್ಕೂ ಮುನ್ನ ನಗರದ ಬಾಬು ಜಗಜೀವನರಾಮ್ ವೃತ್ತದಲ್ಲಿ ತಾಲೂಕಾಡಳಿತದಿಂದ ಪೂಜೆ ಸಲ್ಲಿಸಿದ ನಂತರ ಭಾವಚಿತ್ರವನ್ನು ವೇದಿಕೆವರೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಮಾಜಿ ಶಾಸಕ ಪರಣ್ಣಮುನವಳ್ಳಿ, ತಹಸೀಲ್ದಾರ್ ಯು.ನಾಗರಾಜ್, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡಗೌಡರ್, ನಗರಸಭೆ ಅಧ್ಯಕ್ಷ ಮೌಲಸಾಬ್ ದಾದೇಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸದಸ್ಯ ಸೋಮನಾಥ ಭಂಡಾರಿ, ಮಾಜಿ ಸದಸ್ಯರಾದ ಮನೋಹರಗೌಡ ಹೇರೂರು, ಹುಸೇನಪ್ಪ ಹಂಚಿನಾಳ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಶ್ರುತಿ, ಸಿಡಿಪಿಒ ಜಯಶ್ರೀ ರಾಜಪುರೋಹಿತ್, ಬಿಇಒ ಎಚ್.ಬಿ.ನಟೇಶ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ದಲಿತ ಪರ ಸಂಘಟನೆ ಪದಾಧಿಕಾರಿಗಳಿದ್ದರು.

ತಾಲೂಕಾಡಳಿತ ಕಚೇರಿ

ನಗರದ ತಾಲೂಕಾಡಳಿತ ಸೌದದಲ್ಲೂ ಬಾಬೂಜಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಯು.ನಾಗರಾಜ್, ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು. ಶಿರಸ್ತೇದಾರರಾದ ಕೃಷ್ಣವೇಣಿ, ರವಿಕುಮಾರ ನಾಯಕ್ವಾಡಿ, ಶ್ರೀಕಂಠೇಶ, ಗಾಯತ್ರಿ, ಕವಿತಾ, ನಾಗರತ್ನಮ್ಮ, ಶ್ರೀರಾಂ ಜೋಶಿ, ಮಂಜುನಾಥ, ಮಹೇಶ ದಲಾಲ್, ಎಂ.ಡಿ.ರಫಿ ಇತರರಿದ್ದರು.

ಪ್ರತಿಭಾ ಸ್ಕೂಲ್

ನಗರದ ಈದ್ಗಾ ಕಾಲನಿಯ ಅನುದಾನಿತ ಪ್ರತಿಭಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲೂ ಬಾಬೂಜಿ ಜಯಂತಿ ಆಚರಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷೆ ಪುಟ್ಟಮ್ಮ ಗಿಡ್ಡಿ, ಕಾರ್ಯದರ್ಶಿ ಅರುಣ ಎಚ್.ಗಿಡ್ಡಿ, ಸದಸ್ಯೆ ಶಶಿಕಲಾ ಅರುಣಾ ಗಿಡ್ಡಿ, ಮುಖ್ಯಶಿಕ್ಷಕ ಕೆಂಚಪ್ಪ ಮಾಳಮ್ಮನವರ್, ಶಿಕ್ಷಕರಾದ ಮಂಜುನಾಥ, ಬಿ.ಜ್ಯೋತಿ, ಜೆ.ಜಗನ್ನಾಥ ಬಾಬು, ಶಿವಲೀಲಾ ದಾಕ್ಷಾಯಣಿ, ಅರುಣಾ ಸಿರೀಗೇರಿ, ಪಿ.ಲತಾ, ಶಾಹೀನ್, ಎ.ಲತಾ, ಡಿ.ಗುರುರಾಜ, ಬೀಬನ್ ಬೀ ಇತರರಿದ್ದರು.