ಗಂಗಾವತಿ: ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ನಿಮಿತ್ತ ಜಾಗೃತಿ ಅಭಿಯಾನ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಜೆಸ್ಕಾಂ ಎಇಇ ಮಂಜುನಾಥ ಮಾತನಾಡಿ, ವಿದ್ಯುತ್ ಸುರಕ್ಷತಾ ಸಪ್ತಾಹ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಜೆಸ್ಕಾಂ ಸಿಬ್ಬಂದಿಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಲಾಗುತ್ತಿದೆ. ಸುರಕ್ಷತಾ ಸಾಧನಗಳಿಲ್ಲದೆ ಯಾವುದೇ ವಿದ್ಯುತ್ ಸಂಬಂಧಿಸಿದ ಕಾರ್ಯಕ್ಕೆ ಮುಂದಾಗಬಾರದು. ಅಪಘಾತ ರಹಿತ ಕರ್ತವ್ಯದತ್ತ ಗಮನಹರಿಸಿ ಎಂದರು.
ವಿದ್ಯುತ್ ಅಪಘಾತ ನಿಯಂತ್ರಣಕ್ಕೆ ಪೂರಕವಾದ ಕ್ರಮಗಳ ಕುರಿತು ತಾಂತ್ರಿಕ ಸಿಬ್ಬಂದಿ ಮಾಹಿತಿ ನೀಡಿದರು. ವಿದ್ಯುತ್ ಅಪಘಾತ ನಿಯಂತ್ರಣ ಸಿಬ್ಬಂದಿಗೆ ಸುರಕ್ಷತಾ ಸಲಕರಣೆಗಳನ್ನು ವಿತರಿಸಲಾಯಿತು.
ಉಪವಿಭಾಗ ಕಚೇರಿ ಇಇ ರಿಯಾಜ್ ಅಹ್ಮದ್, ಎಇಇಗಳಾದ ಎಸ್.ಡಿ. ಹಿರೇಮನಿ, ಖಾಜಾಮೊಹಿದ್ದೀನ್, ಲೆಕ್ಕಾಧಿಕಾರಿ ರಫಿಕ್ ಅಹ್ಮದ್, ವಿಷಯ ನಿರ್ವಾಹಕರಾದ ನಂದ ಕಿಶೋರ, ಬಸವರಾಜ, ಹನುಮೇಶ ಜೋಶಿ ಇತರರಿದ್ದರು.