ಗಂಗಾವತಿಯ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಹಿಂದು ಮಹಾಮಂಡಳಿಯಿಂದ ಗಣೇಶ ಪ್ರತಿಷ್ಠಾಪನೆಗಾಗಿ ಧ್ವಜಸ್ತಂಭ ಪೂಜೆ ಗುರುವಾರ ಜರುಗಿತು. ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಂಡಳಿ ಪ್ರತಿನಿಧಿಗಳಾದ ಮಂಜುನಾಥ ವಗರನಾಳ್, ಡಾ.ಕೆ.ಅಮರೇಶ ಇತರರಿದ್ದರು.  
ಜಿಲ್ಲೆ

ಗಣೇಶ ಹಬ್ಬ ರಾಷ್ಟ್ರೀಯತೆಯ ಪ್ರತೀಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಪ್ರಸಕ್ತ ಸಾಲಿನ ಗಣೇಶ ಹಬ್ಬ ಅದ್ದೂರಿ ಆಚರಣೆಗಾಗಿ ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಹಿಂದು ಮಹಾಮಂಡಳಿಯಿಂದ ಗಣೇಶ ಪ್ರತಿಷ್ಠಾಪನೆ ಧ್ವಜಸ್ತಂಭ ಪೂಜೆ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದ್ದು, ಸಂಗೀತ, ಕಲೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಗಣೇಶ ಪ್ರತಿಷ್ಠಾಪನೆಗಾಗಿ ಧ್ವಜಸ್ತಂಭ ಪೂಜೆ ನೇರವೇರಿಸಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪರಂಪರೆ, ಸಂಪ್ರದಾಯದ ಗಣೇಶ ಹಬ್ಬವನ್ನು ಸರ್ವರೂ ಆಚರಿಸಬೇಕಿದ್ದು, ರಾಷ್ಟ್ರೀಯತೆಯ ಪ್ರತೀಕವಾಗಿದೆ ಎಂದರು. ಗಣೇಶ ಪ್ರತಿಷ್ಠಾಪನೆ, ವಿಭಿನ್ನ ಕಾರ್ಯಕ್ರಮ ಮತ್ತು ಸಮಾಜಿಕ ಸೇವೆ ಕುರಿತು ಮಂಡಳಿ ಸದಸ್ಯ ನೀಲಕಂಠಪ್ಪ ನಾಗಶೆಟ್ಟಿ ಮಾತನಾಡಿದರು.

ಮಾಜಿ ಸಂಸದ ಎಸ್.ಶಿವರಾಮನಗೌಡ, ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ, ಮುಖಂಡರಾದ ಡಾ.ಕೆ. ಅಮರೇಶ, ಎಚ್.ಸಂಗಮೇಶ, ಶಿವಕುಮಾರ ಅರಕೇರಿ, ಕುಮಾರ ಹೂಗಾರ್, ಮಂಜುನಾಥ ವಗರನಾಳ್, ಅಯ್ಯನಗೌಡ ಹೇರೂರು, ಚನ್ನಪ್ಪ ಮಳಗಿ, ಆರ್.ದೇವಾನಂದ, ಮಹಾಂತೇಶ ಶಾಸ್ತ್ರಿಮಠ, ಯಮನೂರಿ ಚೌಡ್ಕಿ, ಅಮರಜ್ಯೋತಿ ನರಸಪ್ಪ ಇತರರಿದ್ದರು.