ಓಂಬುಡ್ಸ್‌ಪರ್ಸನ್ ಆದೇಶ ಹೊರಡಿಸಿದ ಪ್ರತಿ.  
ಜಿಲ್ಲೆ

ನಿಯಮ ಉಲ್ಲಂಸಿ ಅನುದಾನ ಬಳಕೆ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಪಂಚಾಯತ್ ರಾಜ್ ಇಲಾಖೆ ನಿಯಮ ಉಲ್ಲಂಸಿ ಅನುದಾನ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಂ ಇಂಜಿನಿಯರಿಂಗ್ ವಿಭಾಗದ ಐವರು ಅಧಿಕಾರಿಗಳಿಂದ 14.93ಲಕ್ಷ ರೂ.ಹಣ ವಸೂಲಿ ಮಾಡುವಂತೆ ಜಿಪಂ ಉದ್ಯೋಗ ಖಾತ್ರಿ ಯೋಜನೆ ಓಂಬುಡ್ಸ್‌ಪರ್ಸನ್ ಆದೇಶಿಸಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ 2021-22ನೇಸಾಲಿನಲ್ಲಿ ತಾಲೂಕಿನ ಚಿಕ್ಕಮಾದಿನಾಳ್ ಮತ್ತು ಮರಳಿ ವ್ಯಾಪ್ತಿಯಲ್ಲಿ 6 ಚೆಕ್‌ಡ್ಯಾಂಗಳನ್ನು

ಕೈಗೆತ್ತಿಕೊಳ್ಳಲಾಗಿತ್ತು. ಯೋಜನೆಯಡಿ ಸಾಮಗ್ರಿ ಖರೀದಿ ವಿಚಾರದಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಬಗ್ಗೆ ಆರ್‌ಟಿಐ

ಕಾರ್ಯಕರ್ತ ಎಸ್.ಎಚ್.ಮುಧೋಳ ದಾಖಲೆ ಸಮೇತ ದೂರು ನೀಡಿದ್ದರು.

ಟೆಂಡರ್ ಕರೆಯದೇ, ಕೊಟೇಷನ್ ಮೂಲಕ ಸಾಮಗ್ರಿ ಖರೀದಿಸಿರುವುದು ಯೋಜನೆ ಮಾರ್ಗ ಸೂಚಿ ಉಲ್ಲಂಘನೆಯಾಗಿದೆ. ಸಂಬಂಧಪಟ್ಟ ಕಡತಗಳಲ್ಲಿ ಅಗತ್ಯ ದಾಖಲೆಗಳು ಇಲ್ಲದಿರುವುದು ಕಂಡು ಬಂದಿದ್ದು, ಲೆಕ್ಕ ಪರಿಶೋಧನೆಯಾಗಿಲ್ಲ. ತೆರಿಗೆ ಸೇರಿ ಆರ್ಥಿಕ ನಿಯಮ ಉಲ್ಲಂಸಿರುವುದು ಕಂಡು ಬಂದಿದೆ. ಖಾತ್ರಿ ಯೋಜನೆ ನಿಯಮಾವಳಿ ಉಲ್ಲಂಸಿ ಅನುದಾನ ಬಳಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಹಣ ವಸೂಲಿ ಮಾಡುವಂತೆ ಜಿಪಂ ಸಿಇಒಗೆ ಓಂಬುಡ್ಸ್‌ಮನ್ ಪರ್ಸನ್ ವೀರಣ್ಣ ಕಳಕಪ್ಪ ಕಮತರ್ ವರದಿ ಸಲ್ಲಿಸಿದ್ದಾರೆ.

ವರದಿ ಹಿನ್ನೆಲೆಯಲ್ಲಿ ಅಂದು ಗಂಗಾವತಿ ಜಿಪಂ ಇಂಜಿನಿಯರಿಂಗ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ್ದ ಇಂಜಿನಿಯರ್‌ಗಳಾದ ಸಿದ್ದಪ್ಪ, ಎಸ್.ಡಿ.ನಾಗೋಡ, ರವಿಪ್ರಸಾದ, ಶಿವಕುಮಾರ ಪೂಜಾರ್ ಮತ್ತು ರಂಗಯ್ಯ ಬಡಿಗೇರ್ ಹಣ ವಸೂಲಿ ಮಾಡಿರುವುದರಲ್ಲದೇ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಆರ್‌ಟಿಐ ಕಾರ್ಯಕರ್ತ ಎಸ್.ಎಚ್.ಮುಧೋಳ ಪ್ರತಿಕ್ರಿಯಿಸಿ, ಹೋರಾಟಕ್ಕೆ ಸಂದ ಜಯವಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕಿದೆ ಎಂದರು.