ಗಂಗಾವತಿ ತಾಲೂಕಿನ ಢಣಾಪುರ ಅಂಗನವಾಡಿ ಕೇಂದ್ರಕ್ಕೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಮಂಗಳವಾರ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸಿದರು. ಗ್ರಾಪಂ ಅಧ್ಯಕ್ಷ ವೀರೇಶಗೌಡ, ಪಿಡಿಒ ಶರಣಮ್ಮ, ಕಾರ್ಯದರ್ಶಿ ರಾಮಕೃಷ್ಣ ಇತರರಿದ್ದರು.  
ಜಿಲ್ಲೆ

ತರಗತಿ ಆರಂಭದಲ್ಲೇ ಕಲಿಕೆಗೆ ಪ್ರೇರೇಪಿಸಿ, ಶಿಕ್ಷಕರಿಗೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಸಲಹೆ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಶಾಲಾವಧಿಯಲ್ಲಿ ಮಕ್ಕಳ ಕಲಿಕೆಗೆ ಶಿಕ್ಷಕರು ಪ್ರೇರಣೆ ನೀಡಬೇಕಿದ್ದು, ಪರೀಕ್ಷೆ ಸಂದರ್ಭದಲ್ಲಿ ಒತ್ತಡ ಹಾಕದಂತೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.

ತಾಲೂಕಿನ ಢಣಾಪುರ ಸ.ಹಿ.ಪ್ರಾ ಮತ್ತು ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಲಿಕಾಮಟ್ಟದ ಸುಧಾರಣೆ ಸಭೆಯಲ್ಲಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಹತ್ತಿರ ಬಂದಾಗ ಮಾತ್ರ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಒತ್ತು ಕೊಡದೆ, ಪ್ರತಿ ದಿನ ಹಾಗೂ ಪ್ರತಿ ತರಗತಿಯಲ್ಲೂ ಗಮನಹರಿಸಬೇಕು. ಶಾಲೆಗಳಲ್ಲಿ ಅನುಭವಿ ಶಿಕ್ಷಕರಿದ್ದು, ಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು. ಮಕ್ಕಳು ನಿತ್ಯ ಓದಿನ ಕಡೆ ಗಮನಹರಿಸಬೇಕಿದ್ದು, ಈ ಬಗ್ಗೆ ವಿಷಯವಾರು ಶಿಕ್ಷಕರು ಸರಿಯಾಗಿ ಕಾರ್ಯನಿರ್ವಹಿಸಿ. ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಎಂದು ಸಲಹೆ ನೀಡಿದರು.

ಪ್ರಾಥಮಿಕ ಶಾಲೆ ವಿಭಾಗಕ್ಕೆ ಭೇಟಿ ನೀಡಿ ಮಕ್ಕಳಿಗೆ ಪಾಠ ಓದಿಸಿ ಅವರ ಬುದ್ಧಿಮಟ್ಟ ಪರಿಶೀಲಿಸಿದರು. ಕುಡಿವ ನೀರು, ಶೌಚಗೃಹ, ಆಟದ ಮೈದಾನ ಸೇರಿ ಇತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ನಂತರ ಗ್ರಾಮದ ಗ್ರಂಥಾಲಯ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಆಹಾರ ಧಾನ್ಯ ಮತ್ತು ಊಟದ ವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಂಡರು. ಗ್ರಾಪಂ ಅಧ್ಯಕ್ಷ ವೀರೇಶಗೌಡ, ಪಿಡಿಒ ಶರಣಮ್ಮ, ಕಾರ್ಯದರ್ಶಿ ರಾಮಕಷ್ಣ, ಪ್ರೌಢಶಾಲೆ ಮುಖ್ಯಶಿಕ್ಷಕ ಹನುಮಂತಪ್ಪ ಇತರರಿದ್ದರು.