ಗಂಗಾವತಿಯ ಅಮರ ಭಗತ್ ಸಿಂಗ್ ನಗರದ ಬಳಿ ದುರ್ಗಮ್ಮ ಹಳ್ಳಕ್ಕೆ ಚೆಕ್‌ಡ್ಯಾಂ ನಿರ್ಮಿಸುವಂತೆ ಒತ್ತಾಯಿಸಿ ದುರ್ಗಮ್ಮನ ಹಳ್ಳ ಸ್ವಚ್ಛತಾ ಸಮಿತಿ ಸದಸ್ಯರು ಕಾಡಾ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿಗೆ ಗುರುವಾರ ಮನವಿ ಸಲ್ಲಿಸಿದರು. 
ಜಿಲ್ಲೆ

ದುರ್ಗಮ್ಮ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಲು ಸ್ವಚ್ಛತಾ ಸಮಿತಿ ಸದಸ್ಯರಿಂದ ಕಾಡಾ ಅಧ್ಯಕ್ಷರಿಗೆ ಮನವಿ

ಗಂಗಾವತಿ: ನಗರದ ಅಮರ ಭಗತ್‌ಸಿಂಗ್ ನಗರದ ಬಳಿ ದುರ್ಗಮ್ಮ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸುವಂತೆ ಒತ್ತಾಯಿಸಿ ದುರ್ಗಮ್ಮನ ಹಳ್ಳ ಸ್ವಚ್ಛತಾ ಸಮಿತಿ ಸದಸ್ಯರು ಕಾಡಾ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿಗೆ ಗುರುವಾರ ಮನವಿ ಸಲ್ಲಿಸಿದರು.

ಸಮಿತಿ ಸಂಚಾಲಕ ಡಾ.ಶಿವಕುಮಾರ್ ಮಾಲಿ ಪಾಟೀಲ್ ಮಾತನಾಡಿ, ಅಮರ ಭಗತ್‌ಸಿಂಗ್ ನಗರದ ಬಳಿ ದುರ್ಗಮ್ಮ ಹಳ್ಳಕ್ಕೆ ಅಡ್ಡಲಾಗಿ ರೈತರು ಕಲ್ಲುಗಳನ್ನು ಹಾಕಿ ಗದ್ದೆಗಳಿಗೆ ನೀರು ಹರಿಸುತ್ತಿದ್ದಾರೆ. ನೀರು ರಭಸವಾಗಿ ಹರಿಯದಿರುವುದರಿಂದ ತ್ಯಾಜ್ಯ ಮತ್ತು ಹೂಳು ತುಂಬುತ್ತಿದೆ. ಇದರಿಂದಾಗಿ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಿ ಕೃಷಿಗೆ ಅನುಕೂಲ ಮಾಡಿಕೊಡಬೇಕು. ರೈತರಿಗೆ ನೀರು ಬೇಡವಾದಾಗ ಪ್ಲಾೃಸ್ಟಿಕ್ ಹಾಗೂ ಇತರ ತ್ಯಾಜ್ಯ ತೆಗೆದು ಗೇಟ್ ಮೂಲಕ ನೀರು ಹರಿಸಬೇಕೆಂದು ಮನವಿ ಮಾಡಿದರು. ಸಮಿತಿ ಸದಸ್ಯರಾದ ಉಮೇಶ್ ಸಿಂಗನಾಳ, ಶ್ರೀಹರಿ ನೆಕ್ಕಂಟಿ, ಪವನಕುಮಾರ್ ಗುಂಡೂರ, ಪ್ರಹ್ಲಾದ್ ಕುಲಕರ್ಣಿ, ಮೈಲಾರಪ್ಪ ಬೂದಿಹಾಳ ಹಾಗೂ ಇತರರಿದ್ದರು.