ಪೊಲೀಸ್ ಇಲಾಖೆಯಿಂದ ಚಾಲನಾ ಪರವಾನಗಿಗಾಗಿ ಆರ್‌ಟಿಒ ಕ್ಯಾಂಪ್ ಆಯೋಜಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ಸದಸ್ಯರು ಗಂಗಾವತಿಯಲ್ಲಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್‌ಗೆ ಗುರುವಾರ ಮನವಿ ಸಲ್ಲಿಸಿದರು. ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಉದಯನಾಯಕ್, ಪದಾಧಿಕಾರಿಗಳಾದ ಪೃಥ್ವಿರಾಜ್, ಶ್ರೀಧರ್, ಕಿರಣಕುಮಾರ, ರಾಹುಲ್, ಗುರುರಾಜ್ ಇತರರಿದ್ದರು.  
ಜಿಲ್ಲೆ

ಆಟಿಒ ಕ್ಯಾಂಪ್ ಆಯೋಜಿಸಿ, ಪೊಲೀಸ್ ಇಲಾಖೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮನವಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ವಾಹನ ಸವಾರರ ಅನುಕೂಲಕ್ಕಾಗಿ ಪೊಲೀಸ್ ಇಲಾಖೆಯಿಂದ ಚಾಲನಾ ಪರವಾನಗಿಗಾಗಿ ಆರ್‌ಟಿಒ ಕ್ಯಾಂಪ್ ಆಯೋಜಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ಸದಸ್ಯರು ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್‌ಗೆ ಗುರುವಾರ ಮನವಿ ಸಲ್ಲಿಸಿದರು.

ನಗರದ ಆನೆಗೊಂದಿ ರಸ್ತೆಯ ಎಸ್‌ಕೆಎನ್‌ಜಿ ಕಾಲೇಜು ಮುಂದೆ ವ್ಯವಸ್ಥೆ ಮಾಡಿರುವ ವಾಹನ ತಪಾಸಣೆ ಚೌಕಿ ತೆರವುಗೊಳಿಸುವಂತೆ ಒತ್ತಾಯಿಸಿದರು.

ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಉದಯನಾಯಕ್ ಮಾತನಾಡಿ, ಇತ್ತೀಚಿಗೆ ನಗರದಲ್ಲಿ ಬೈಕ್ ಸೇರಿ ಇತರ ವಾಹನಗಳ ತಪಾಸಣೆ ಹೆಚ್ಚಾಗಿದ್ದು, ಅದರಲ್ಲೂ ಸರ್ಕಾರಿ ಪದವಿ ಕಾಲೇಜು ಮುಂದೆ ಹಾಕಿರುವ ತಪಾಸಣೆ ಚೌಕಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸಕಾಲಕ್ಕೆ ಬಸ್ ಸೌಲಭ್ಯವಿಲ್ಲದಿದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬೈಕ್‌ನಲ್ಲಿ ಬರುತ್ತಿದ್ದು, ಪೊಲೀಸ್ ಚೌಕಿಯಿಂದ ಕಾಲೇಜಿನತ್ತ ಬರಲು ಹೆದರುತ್ತಿದ್ದಾರೆ. ಇದರಿಂದ ಹಾಜರಾತಿ ಪ್ರಮಾಣ ಕಡಿಮೆಯಾಗುತ್ತಿದೆ.

ಅದರಂತೆ ಆನೆಗೊಂದಿಗೆ ತೆರಳುವ ವ್ಯಾಪಾರಿಗಳು, ಕೃಷಿಕರು ಮತ್ತು ಪ್ರವಾಸಿಗರಿಗೂ ತಪಾಸಣೆ ಚೌಕಿಯಿಂದ ಕಿರಿಕಿರಿ ಹೆಚ್ಚಾಗಿದೆ. ಕೆಲ ವಿದ್ಯಾರ್ಥಿಗಳು ಚಾಲನಾ ಪರವಾನಗಿ ಸೇರಿ ಇತರ ದಾಖಲೆಗಳಿಗಾಗಿ ಆರ್‌ಟಿಒಗೆ ಅರ್ಜಿ ಸಲ್ಲಿಸಿದ್ದರೂ ಸಕಾಲಕ್ಕೆ ಮಂಜೂರಾಗುತ್ತಿಲ್ಲ. ಚಾಲನಾ ಪರವಾನಗಿ, ವಾಹನಗಳ ದಾಖಲೆಗಳು ಮತ್ತು ವಿಮೆಗಾಗಿ ಪೊಲೀಸ್ ಇಲಾಖೆ ಆರ್‌ಟಿಒ ಕ್ಯಾಂಪ್ ಆಯೋಜಿಸಬೇಕಿದ್ದು, ಪರಿಷತ್ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಪದಾಧಿಕಾರಿಗಳಾದ ಪೃಥ್ವಿರಾಜ್, ಶ್ರೀಧರ್, ಕಿರಣಕುಮಾರ, ರಾಹುಲ್, ಗುರುರಾಜ್ ಇತರರಿದ್ದರು.