ಗಂಗಾವತಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪೂಜಾ ಸಾಮಾಗ್ರಿ ಮತ್ತು ದೈನಂದಿನ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಅನಿವಾರ್ಯತೆಯಿಂದ ಸಂಪ್ರದಾಯದ ಪೂಜೆ ಕೈಗೊಳ್ಳುವ ಸ್ಥಿತಿ ಬಂದಿದೆ.
ಹಬ್ಬ ಮೂರುದಿನ ಬಂದಿರುವುದರಿಂದ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿದೆ. ಪ್ರಮುಖ ವೃತ್ತಗಳೆಲ್ಲ ಹೂವು, ಹಣ್ಣು ಮಾರಾಟದ ಕೇಂದ್ರಗಳಾಗಿ ಪರಿರ್ವನೆಯಾಗಿವೆ. ಗಾಂಧಿ, ಗಣೇಶ, ಸಿಬಿಎಸ್, ಮಹಾವೀರ ಮತ್ತು ಗುಂಡಮ್ಮಕ್ಯಾಂಪ್ ಮಾರುಕಟ್ಟೆ ಪ್ರಾಂಗಣದಲ್ಲಿ ಬಾಳೆ ಕಂಬ, ಕಬ್ಬು, ಅಡಕೆ, ಚೆಂಡು ಹೂವು ಗಿಡಗಳನ್ನು ಮಾರಾಟ ಮಾಡಲಾಗುತ್ತಿದ್ದು, ಕನಿಷ್ಠ 30ರಿಂದ 120ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಕೆಜಿಗೆ ಸೇಬು, ಮೊಸಂಬಿ, ದಾಳಿಂಬೆ, ಪೇರಲ, ಸಪೋಟಾ 100ರೂ.ಗಳ ಗಡಿ ದಾಟಿದ್ದರೆ, ಬಾಳೆ, ದ್ರಾಕ್ಷಿ, ಅಂಜೂರು ಇತರ ಹಣ್ಣುಗಳಿಗೆ 50 ರಿಂದ 80ರೂ.ವರೆಗೆ ದರ ನಿಗದಿಯಾಗಿದೆ.
ಫುಟ್‌ಪಾತೇ ಮಾರುಕಟ್ಟೆ: ಸೇವಂತಿ, ಮಲ್ಲಿಗೆ ಒಂದು ಕೆಜಿಗೆ 300 ರಿಂದ 400ರೂ., ಚೆಂಡು ಹೂ ಕೆಜಿಗೆ 100ರೂ.ನಂತೆ ಮಾರಾಟವಾಗುತ್ತಿದೆ. ಇನ್ನೂ ಸಿದ್ಧಪಡಿಸಿದ ಹೂವಿನ ಮಾಲೆಗಳು ಕನಿಷ್ಠ 100ರಿಂದ 1000ರೂ.ವರೆಗೆ ನಿಗದಿಯಾಗಿವೆ. ತರಕಾರಿಯನ್ನು 250ಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದ್ದು, 40ರಿಂದ 120ರೂ.ವರೆಗೆ ಮಾರಾಟವಾಗುತ್ತಿದೆ. ಹಸಿರು ಪಲ್ಲೆಯೂ 20ರೂ.ಗಿಂದ ಅಧಿಕವಿದೆ. ಶೇಂಗಾ, ಎಳ್ಳೆಣ್ಣಿ ಕೆಜಿಗೆ 20ರೂ.ಗಳಿಂದ 30ರೂ. ಹೆಚ್ಚಾಗಿದೆ. ಪೂಜಾ ಸಾಮಾಗ್ರಿಗಳ ಬೆಲೆ ಹೆಚ್ಚಾದರೆ, ಬಟ್ಟೆ ಬೆಲೆ ಮಾತ್ರ ಕಡಿಮೆಯಾಗಿದೆ. ಪೈಪೋಟಿ ದರದಲ್ಲಿ ಬಟ್ಟೆ ಮಾರಾಟ ಮಾಡಲಾಗುತ್ತಿದ್ದು, ುಟ್‌ಪಾತ್ ವ್ಯಾಪಾರಕ್ಕೆ ಜನ ಸೈ ಎಂದಿದ್ದಾರೆ.
್ಲೆಕ್ಸ್‌ಗಳ ಹಾವಳಿ ಟ್ರಾಫಿಕ್ ಕಿರಿಕಿರಿ..
ನಗರಾದ್ಯಂತ ಹಾಕಿರುವ ್ಲೆಕ್ಸ್‌ಗಳು ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದು, ಜನಜಂಗುಳಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ನಡೆಸುತ್ತಿದ್ದಾರೆ. ಅದರಲ್ಲೂ ಕೊಪ್ಪಳ-ರಾಯಚೂರು ರಸ್ತೆಯಲ್ಲಿ ಹಾಕಿರುವ ್ಲೆಕ್ಸ್‌ಗಳು ಅಪಘಾತಕ್ಕೆ ಕಾರಣವಾಗುತ್ತಿವೆ. ನಗರಸಭೆಗೆ ಆದಾಯವಿಲ್ಲದ ್ಲೆಕ್ಸ್‌ಗಳನ್ನು ಹಾಕಲು ಪರವಾನಗಿ ನೀಡಿದವರ‌್ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಆದಾಯವಿಲ್ಲದಿದ್ದರೂ ನಗರಸಭೆ ಅಧಿಕಾರಿಗಳಿಗೆ ್ಲೆಕ್ಸ್‌ಗಳ ಹಾವಳಿ ನಿಯಂತ್ರಿಸುವಲ್ಲಿ ವಿಲವಾಗಿದ್ದಾರೆ.
ಹೂವು, ಹಣ್ಣುಗಳು ದುಬಾರಿಯಾಗಿದ್ದು, ಸಾಂಪ್ರದಾಯಿಕ ಪೂಜೆಗಾಗಿ ಖರೀದಿಸುವುದು ಅನಿವಾರ್ಯವಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಶಾಸ್ತ್ರೋಕ್ತ ಪೂಜೆ ಮಾಡುವುದು ಅಸಾಧ್ಯ.
ಅಜಿತ್‌ಕುಮಾರ ಕುಲ್ಕರ್ಣಿ, ಗ್ರಾಹಕ
--------------------
ಟ್ರಾಫಿಕ್ ಜಾಮ್ ಆಗುವ ಪ್ರದೇಶದಲ್ಲಿ ್ಲೆಕ್ಸ್‌ಗಳಿದ್ದರೆ ತೆರೆವುಗೊಳಿಸಲಾಗುತ್ತಿದ್ದು, ನಗರಸಭೆಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯತಕ್ಕದ್ದು. ಈ ಬಗ್ಗೆ ಸಂಬಂಧಪಟ್ಟ ವಿಷಯ ನಿರ್ವಾಹಕರಿಂದ ಮಾಹಿತಿ ಪಡೆಯಲಾಗುವುದು.
ಆರ್.ವಿರೂಪಾಕ್ಷಮೂರ್ತಿ
ಪೌರಾಯುಕ್ತ, ನಗರಸಭೆ, ಗಂಗಾವತಿ