ಜಿಲ್ಲೆ

ಢಣಾಪುರ ಪಿಎಸ್ಸೆಸ್ಸೆನ್‌ಗೆ ರಾಂಬಾಬು ಅಧ್ಯಕ್ಷ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ತಾಲೂಕಿನ ಢಣಾಪುರದ ಪಿಎಸ್ಸೆಸ್ಸೆನ್ ಆಡಳಿತ ಮಂಡಳಿಗೆ ರಾಂಬಾಬು ಶೇಷರಾವ್(ಅಧ್ಯಕ್ಷ) ಯಂಕಮ್ಮ ಬೆಟ್ಟಪ್ಪ ಬಾವಿಕಟ್ಟಿ (ಉಪಾಧ್ಯಕ್ಷೆ) ಅಜಜಿ ಶನಿವಾರ ಅವಿರೋಧ ಆಯ್ಕೆಯಾದರು. ಪಿಎಸ್ಸೆಸ್ಸೆನ್ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

ಎರಡೂ ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಆಯ್ಕೆಯನ್ನು ಅವಿರೋಧವೆಂದು ಚುನಾವಣಾಧಿಕಾರಿ ಜೆ.ನಾಗರಾಜ್ ೋಷಿಸಿದರು.ನಿರ್ದೇಶಕರಾದ ರಮೇಶ ಗುಂಡೂರು, ಬಿ.ರಾಘವೇಂದ್ರ, ಮಂಜುನಾಥ, ಈರಣ್ಣ ಬಡಿಗೇರ, ವೀರನಾಗಪ್ಪ, ಟಿ.ರಾಘವೇಂದ್ರ, ಭುವನೇಶ, ಲಕ್ಷ್ಮೀದೇವಿ, ಮಹಾಂಕಾಳಮ್ಮ, ಪಕೀರಮ್ಮ ವಂಕಲಕುಂಟಿ ಅವರಿಗೆ ಸದಸ್ಯತ್ವದ ಪ್ರಮಾಣ ವಿತರಿಸಲಾಯಿತು. ಗ್ರಾಮದ ಮುಖಂಡರಾದ ಗುಂಡಯ್ಯಸ್ವಾಮಿ, ಅಮರೇಶ, ಈ.ಚಿದಾನಂದಪ್ಪ, ಬೀರಲಿಂಗಪ್ಪ ಯರಡೊಣ, ಹನುಮೇಶ ಡೊಳ್ಳು, ಕಷ್ಣ ಬಾಗೋಡಿ, ಟೀಕಯ್ಯ, ರುದ್ರಗೌಡ, ಹನುಮೇಶ, ನರಸಯ್ಯ, ಬಸವರಾಜ, ನಾಗರಾಜ ಬಾವಿಕಟ್ಟಿ ಇತರರಿದ್ದರು.