ಗಂಗಾವತಿ ಗಾಂಧಿ ವೃತ್ತದಲ್ಲಿ ಮಾದಕ ವಸ್ತು ಬಳಕೆ ವಿರೋಧಿ ದಿನ ನಿಮಿತ್ತ ಪೊಲೀಸ್ ಇಲಾಖೆಯಿಂದ ಸೈಕಲ್ ಜಾಗೃತಿ ಜಾಥಾ ಗುರುವಾರ ನಡೆಯಿತು. ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ನಗರ ಪಿಐ ಪ್ರಕಾಶ ಮಾಳೆ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಚೆನ್ನುಪಾಟಿ ಪ್ರಭಾಕರ, ಡಾ.ಶಿವಕುಮಾರ ಮಾ.ಪಾಟೀಲ್ ಇತರರಿದ್ದರು.  
ಜಿಲ್ಲೆ

ಉತ್ತಮ ಹವ್ಯಾಸದಿಂದ ಭವಿಷ್ಯ ಭದ್ರ, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಅನಿಸಿಕೆ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಮಾದಕ ಮತ್ತು ತಂಬಾಕು ಪ್ರೇರಿತ ವಸ್ತುಗಳಿಂದ ದೂರವಿರಬೇಕಿದ್ದು, ಉತ್ತಮ ಹವ್ಯಾಸಗಳೊಂದಿಗೆ ಭವಿಷ್ಯ ರೂಪಿಸಿಕೊಳ್ಳುವಂತೆ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಹೇಳಿದರು.

ನಗರದ ಗಾಂಧಿ ವೃತ್ತದಲ್ಲಿ ಮಾದಕ ವಸ್ತು ವಿರೋಧಿ ದಿನ ನಿಮಿತ್ತ ಪೊಲೀಸ್ ಇಲಾಖೆ, ಭಾರತೀಯ ವೈದ್ಯಕೀಯ ಸಂಘ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸೈಕಲ್ ಜಾಗೃತಿ ಜಾಥಾದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆಯಿಂದ ಕಾನೂನು ಬಾಹೀರ ಚಟುವಟಿಕೆಗಳಿಗೆ ಕಾರಣವಾಗುತ್ತಿದ್ದು, ಕುಟುಂಬದ ಮಾನ ಮರ್ಯಾದೆಗೆ ಧಕ್ಕೆ ಬರಲಿದೆ. ತಂಬಾಕು ಪ್ರೇರಿತ ಮತ್ತು ಮಾದಕ ವಸ್ತುಗಳಿಂದ ದೂರವಿರುವಂತೆ ಸಲಹೆ ನೀಡಿದರು.

ಐಎಂಎ ತಾಲೂಕಾಧ್ಯಕ್ಷ ಡಾ.ಎ.ಎಸ್.ಎನ್.ರಾಜು ಮಾತನಾಡಿ, ಡ್ರಗ್ಸ್‌ಗೆ ಅಂಟಿಕೊಂಡ ಯುವಕ, ಯುವತಿಯರು ಪ್ರಜ್ಞೆ ಕಳೆದುಕೊಳ್ಳುತ್ತಿದ್ದು, ಮಾನಸಿಕ ಮತ್ತು ದೈಹಿಕ ಸಮತೋಲನ ಕಳೆದುಕೊಳ್ಳಲಿದ್ದಾರೆ ಎಂದರು.

ಗೋಗ್ರೀನ್, ಚಾರಣ ಬಳಗ, ಕಿಷ್ಕಿಂಧಾ ಯುವ ಚಾರಣ ಬಳಗ, ಲಯನ್ಸ್ ಕ್ಲಬ್, ಪರಿಸರ ಸೇವಾ ಟ್ರಸ್ಟ್ , ್ಲೈಯಿಂಗ್ ೆದರ್ಸ್‌, ವಿಜಯನಗರ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ, ನಗರದಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿತು.

ನಗರ ಪಿಐ ಪ್ರಕಾಶ ಮಾಳೆ, ಸಂಚಾರ ಪಿಎಸೈಗಳಾದ ಶಾರದಮ್ಮ, ವೆಂಕಟೇಶ ಚವ್ಹಾಣ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಚೆನ್ನುಪಾಟಿ ಪ್ರಭಾಕರ, ಡಾ.ಶಿವಕುಮಾರ ಮಾ.ಪಾಟೀಲ್, ಡಾ.ಕೆ.ಎನ್.ಮಧುಸೂದನ, ಡಾ.ಅಮರ ಪಾಟೀಲ್, ಡಾ.ವಾದಿರಾಜ್ ಗೋರೆಬಾಳ್, ಬ್ಯಾಬೇಜ್ ಮಿಲ್ಟನ್, ಚೇತನ ಹಿರೇಮಠ, ಮಂಜುನಾಥ ಗುಡ್ಲಾನೂರ್, ಹನುಮೇಶ ಭಾವಿಕಟ್ಟಿ ಇತರರಿದ್ದರು.