ಗಂಗಾವತಿ ವಿರುಪಾಪುರದ ಬೇತಲ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸಮನ್ವಯ ಕಾರ್ಯಕ್ರಮವನ್ನು ಹಿರೇಜಂತಕಲ್ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕ ವಿ.ವಿ.ಗೊಂಡಬಾಳ್ ಸೋಮವಾರ ಉದ್ಘಾಟಿಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜೋಸ್ೆ ರಾಜು ಸುಧಾಕರ್, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಆಡಳಿತಾಧಿಕಾರಿ ಹೇಮಾಸುಧಾಕರ ದಯಾಶೀಲ ಇತರರಿದ್ದರು.  
ಜಿಲ್ಲೆ

ಶಿಕ್ಷಣದೊಂದಿಗೆ ಶಿಸ್ತಿಗೂ ಆದ್ಯತೆ ನೀಡಲಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ವಿದ್ಯಾರ್ಥಿಗಳ ಚಿಂತನೆ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಬೇಕಿದ್ದು, ಶಿಕ್ಷಣದೊಂದಿಗೆ ಶಿಸ್ತಿಗೂ ಆದ್ಯತೆ ನೀಡುವಂತೆ ಹಿರೇಜಂತಕಲ್ ಉನ್ನತೀಕರಿಸಿದ ಸ.ಹಿ.ಪ್ರಾ. ಶಾಲೆ ಮುಖ್ಯಶಿಕ್ಷಕ ವಿ.ವಿ.ಗೊಂಡಬಾಳ್ ಹೇಳಿದರು.

ನಗರದ ವಿರುಪಾಪುರದ ಬೇತಲ್ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸಮನ್ವಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿ ವ್ಯಕ್ತಿಯ ಶ್ರಮ ದೇಶದ ಅಭಿವದ್ಧಿಗೆ ಪೂರಕವಾಗಿರಬೇಕು. ಗೆಲುವಿಗೆ ಅಪಾರ ಮೌಲ್ಯವಿದ್ದರೆ, ಸೋಲಿನಲ್ಲೂ ಪಾಠಗಳಿರುತ್ತವೆ. ವಿಲಕ್ಕೆ ಆದ್ಯತೆ ನೀಡದೇ ಸಲತೆಯತ್ತ ಕೇಂದ್ರೀಕರಿಸಿ ಎಂದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜೋಸ್ೆ ರಾಜು ಸುಧಾಕರ್ ಮಾತನಾಡಿ, ಭವಿಷ್ಯ ಪ್ರಬಲವಾಗಬೇಕಾದರೆ ಜ್ಞಾನ, ಶಿಸ್ತು ಮತ್ತು ನೈತಿಕತೆ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ರಾಷ್ಟ್ರ ಮಟ್ಟದ ಕ್ರೀಡಾ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಆಡಳಿತಾಧಿಕಾರಿ ಹೇಮಾಸುಧಾಕರ ದಯಾಶೀಲ, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಖಜಾಂಚಿ ಸುಜಾತಾರಾಜು, ಪ್ರಾಚಾರ್ಯ ವೆಂಕಟೇಶ ಬಿಂಗಿ, ಉಪನ್ಯಾಸಕ ಹನುಮಂತಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಬಾಬುಸಾಬ್ ಇತರರಿದ್ದರು.