ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಪದವಿ ವಿದ್ಯಾರ್ಥಿಗಳ ಸಹ ಪಠ್ಯ ಚಟುವಟಿಕೆಗಳ ಸಮಾರೋಪದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ಸೋಮವಾರ ವಿತರಿಸಲಾಯಿತು. ಪ್ರಾಂಶುಪಾಲೆ ಡಾ.ಕೆ.ಎಸ್.ಶೋಭಾ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಸುಂಕೇಶ್ವರ ಕರಿಗೂಳಿ, ಸಾಂಸ್ಕೃತಿಕ ಘಟಕದ ಸಂಚಾಲಕ ಕೆ.ತಾತಪ್ಪ ಇತರರಿದ್ದರು.  
ಜಿಲ್ಲೆ

ಪದವಿ ಬಳಿಕ ವೃತ್ತಿಯತ್ತ ಗಮನಹರಿಸಲಿ. ಪ್ರೊ.ಸುಂಕೇಶ್ವರ ಕರಿಗೂಳಿ ಸಲಹೆ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಪದವಿ ಮುಗಿದ ನಂತರ ಕಾಲಹರಣಕ್ಕೆ ಅವಕಾಶ ನೀಡದೇ ಉನ್ನತ ಅಭ್ಯಾಸ ಮಾಡಿ ಇಲ್ಲವೇ ವೃತ್ತಿಯತ್ತ ಗಮನಹರಿಸಿ ಎಂದು ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಸುಂಕೇಶ್ವರ ಕರಿಗೂಳಿ ಹೇಳಿದರು.

ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಪದವಿ ವಿದ್ಯಾರ್ಥಿಗಳ ಸಹ ಪಠ್ಯ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿದರು. ಪದವಿ ಪಡೆದ ನಂತರ ಕುಟುಂಬಕ್ಕೆ ಅಸರೆಯಾಗಬೇಕಿದ್ದು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಅಧ್ಯಯನ, ವೃತ್ತಿ ಮತ್ತು ರಾಷ್ಟ್ರ ನಿರ್ಮಾಣದ ಪರಿಶುದ್ಧ ರಾಜಕೀಯದತ್ತ ಗಮನಹರಿಸಿ ಎಂದರು.

ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲೆ ಡಾ.ಕೆ.ಎಸ್.ಶೋಭಾ ಮಾತನಾಡಿ, ಬಹುಮುಖ ಖಚಿತ ಚಿಂತನೆ ಮೂಲಕ ಭವಿಷ್ಯದ ಬದುಕು ಕಟ್ಟಿಕೊಳ್ಳಿ ಎಂದರು. ವಾರ್ಷಿಕ ಕ್ರೀಡಾಕೂಟ ಮತ್ತು ಮಹಿಳಾ ಸಬಲೀಕರಣ ಕೋಶದಿಂದ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಾಂಸ್ಕೃತಿಕ ಘಟಕದ ಸಂಚಾಲಕ ಕೆ.ತಾತಪ್ಪ, ಐಕ್ಯೂಎಸಿ ಸಂಚಾಲಕ ರವಿಕುಮಾರ, ಐಟಿ ಸಂಚಾಲಕ ಡಾ.ಶಶಿಕುಮಾರ, ರೆಡ್ ರಿಬ್ಬನ್ ಸಂಚಾಲಕ ಶಂಕ್ರಪ್ಪ, ಪ್ರೇರಣಾ ಸಂಚಾಲಕ ಕೆ.ವಿರೂಪಾಕ್ಷಪ್ಪ, ಸಹ ಪ್ರಾಧ್ಯಾಪಕ ಡಾ.ಸರ್ರಾಜ್, ಉಪನ್ಯಾಸಕರಾದ ಸಂಧ್ಯಾ, ಪೀರಾವಲಿ, ನಂದಕುಮಾರ್, ಈಶಪ್ಪ ಮೇಟಿ, ಸಿಬ್ಬಂದಿ ಜಬೀನಾ ಬೇಗಂ, ವಿನಾಯಕ, ಪಲ್ಲವಿ, ಗಾಯತ್ರಿ ಶಿವಾಂಜಲಿ, ದರ್ಶನ, ಾತೀಮಾ ಇತರರಿದ್ದರು.