ಜಿಲ್ಲೆ

ಎಲ್ಲ ಕ್ಷೇತ್ರದಲ್ಲೂ ಮಹಿಳೆಯಿಂದ ಸಾಧನೆ

ಪ್ರವೀಣ ಉದುಸಾ ದಲಬಂಜನ್

ಗಂಗಾವತಿ: ಪೈಪೋಟಿ ಜಗತ್ತಿನಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ನೀಡಬೇಕು. ಅವರಿಗೆ ಅನುಕಂಪ ತೋರಿಸುವುದು ಬೇಡ ಎಂದು ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ.ಕೆ.ಎಸ್.ಶೋಭಾ ಸಲಹೆ ನೀಡಿದರು.

ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ಎಲ್ಲ ಕ್ಷೇತ್ರದಲ್ಲೂ ಮಹಿಳೆ ಸಾಧನೆ ಮಾಡುತ್ತಿದ್ದು, ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ವಾಣಿಜ್ಯಶಾಸ ವಿಭಾಗದ ಮುಖ್ಯಸ್ಥ ಪ್ರೊ.ಸುಂಕೇಶ್ವರ ಕರಿಗೂಳಿ ಮಾತನಾಡಿ, ಸರ್ವ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನತೆ ದೊರೆಯಬೇಕಿದ್ದು, ಉನ್ನತ ಶಿಕ್ಷಣದೊಂದಿಗೆ ಮಹಿಳೆಯರು ಅತ್ಯುನ್ನತ ಹುದ್ದೆ ಪಡೆಯುವಂತೆ ಸಲಹೆ ನೀಡಿದರು.

ವಿವಿಧ ಕ್ಷೇತ್ರದ ಸಾಧಕರಾದ ಡಾ.ಕೆ.ಎಸ್.ಶೋಭಾ, ಸಂಧ್ಯಾ, ಜಬೀನಾ ಬೇಗಂ, ಶಾಂತಮ್ಮ, ಸಾವಿತ್ರಮ್ಮ, ಡಿಜಿಟಲ್ ಮಾರ್ಕೆಟಿಂಗ್ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಅಖಿಲಾಂಡೇಶ್ವರಿ ವಾಸಂಶೆಟ್ಟಿಯನ್ನು ಸನ್ಮಾನಿಸಲಾಯಿತು. ಮಹಿಳಾ ಸಾಧಕರ ಕುರಿತು ವಿದ್ಯಾರ್ಥಿ ಪ್ರತಿನಿಧಿಗಳಾದ ಸೂಫಿಯಾ, ಲಾವಣ್ಯ, ರಾಧಿಕಾ, ಪಲ್ಲವಿ, ಗಾಯತ್ರಿ, ಮಹೇಶ್ವರಿ, ಅಮ್ರೀನ್ ಬೇಗಂ ವಿಚಾರ ಮಂಡಿಸಿದರು.

ಆಂಗ್ಲ ವಿಭಾಗದ ಮುಖ್ಯಸ್ಥ ಡಾ.ಸರ್ಫರಾಜ್ ಅಹ್ಮದ್, ಪ್ರಾಧ್ಯಾಪಕರಾದ ರವಿಕುಮಾರ್, ವಿರೂಪಾಕ್ಷ, ಶಂಕ್ರಪ್ಪ, ಶಶಿಕುಮಾರ್, ವೆಂಕಟರಾಜು, ಪೀರಾವಲಿ, ದೇವರಾಜ್, ಪರಶುರಾಮ್, ಈಶಪ್ಪ ಮೇಟಿ, ದುರ್ಗಾ ಕಷ್ಣ, ಸಹಾಯಕ ಪ್ರಾಧ್ಯಾಪಕ ಕೆ.ತಾತಪ್ಪ ಇತರರಿದ್ದರು.