ಗಂಗಾವತಿ ತುಳಸಪ್ಪ ಛತ್ರದ ಬಯಲಲ್ಲಿ ಅಖಿಲ ಭಾರತ ಸಂಘಟನೆಗಳ ಕೇಂದ್ರೀಯ ಸಮಿತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಕರ್ನಾಟಕ ಪ್ರಗತಿಪರ ಪೌರ ಕಾರ್ಮಿಕರ ಸಂಘದ ತಾಲೂಕಾಧ್ಯಕ್ಷೆ ಮಾಯಮ್ಮಗೆ ಆದೇಶ ಪತ್ರ ವಿತರಿಸಲಾಯಿತು. ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ವಿಜಯ ದೊರೆರಾಜು,ಪದಾಧಿಕಾರಿಗಳಾದ ಸಣ್ಣ ಹನುಮಂತಪ್ಪ ಹುಲಿಹೈದರ್, ಪರಶುರಾಂ, ಕೇಶವ ನಾಯ್ಕ ಇತರರಿದ್ದರು. 
ಜಿಲ್ಲೆ

ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳ ಆಯ್ಕೆ

ಗಂಗಾವತಿ: ನಗರದ ತುಳಸಪ್ಪ ಛತ್ರದ ಬಯಲಲ್ಲಿ ಅಖಿಲ ಭಾರತ ಸಂಘಟನೆಗಳ ಕೇಂದ್ರೀಯ ಸಮಿತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಕರ್ನಾಟಕ ಪ್ರಗತಿಪರ ಪೌರ ಕಾರ್ಮಿಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳನ್ನು ಶನಿವಾರ ಆಯ್ಕೆ ಮಾಡಲಾಯಿತು.

ಸಭೆಯ ನೇತೃತ್ವವಹಿಸಿದ್ದ ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷ ವಿಜಯ ದೊರೆರಾಜು ಮಾತನಾಡಿ, ಸಂಘಟನಾತ್ಮಕವಾಗಿ ಹಕ್ಕುಗಳನ್ನು ಪಡೆಯಬೇಕಿದ್ದು, ಆರೋಗ್ಯ ರಕ್ಷಣೆಯತ್ತ ಗಮನಹರಿಸುವಂತೆ ಸಲಹೆ ನೀಡಿದರು.

ಪದಾಧಿಕಾರಿಗಳ ಆಯ್ಕೆ: ಸಂಘದ ತಾಲೂಕು ಘಟಕಕ್ಕೆ ಹನುಮಂತಪ್ಪ (ಗೌರವಾಧ್ಯಕ್ಷ), ಮಾಯಮ್ಮ (ಅಧ್ಯಕ್ಷೆ), ಪಾರ್ವತಮ್ಮ (ಉಪಾಧ್ಯಕ್ಷೆ), ಕೆ.ರಮೇಶ (ಕಾರ್ಯದರ್ಶಿ), ಗಾಲಿಹುಲಿಗೆಮ್ಮ (ಖಜಾಂಚಿ), ಬಂಕದ ಹುಲಿಗೆಮ್ಮ (ಸಹಖಜಾಂಚಿ), ಹೇಮಣ್ಣ, ಕೊಟ್ರಪ್ಪ, ಇಂದ್ರಮ್ಮ, ಕರಿಮೂರ್ತಿ ಹನುಮಂತಪ್ಪ, ದುರುಗಪ್ಪ ಕಲ್ಗುಡಿ, ಗಂಗಮ್ಮ, ನಾಗಮ್ಮ ಮಲಿಕಪ್ಪ, ಬಾಬರ್, ಮೌಲಪ್ಪ ಮತ್ತು ಸಣ್ಣ ಹುಲುಗಪ್ಪ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ.