ಗಂಗಾವತಿ: ಕಾರ್ಮಿಕ ಹಕ್ಕುಗಳನ್ನು ಹೋರಾಟದ ಮೂಲಕ ಪಡೆಯಬೇಕಿದ್ದು, ಸಂಘಟನಾತ್ಮಕವಾಗಿ ಕಾರ್ಮಿಕರು ಬಲಿಷ್ಟರಾಗುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಹೇಳಿದರು.
ನಗರದ ಸಿಐಟಿಯು ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ೆಡರೇಷನ್‌ನ ತಾಲೂಕು ಮಟ್ಟದ 2ನೇ ಸಮ್ಮೇಳನದಲ್ಲಿ ಮಾತನಾಡಿದರು ಕಾರ್ಮಿಕರಿಗೆ ಸರ್ಕಾರದಿಂದ ಸೌಲಭ್ಯಕೊಡಿಸುವ ನಿಟ್ಟಿನಲ್ಲಿ ಸಂಘಟನೆ ಪರಿಣಾಮಕಾರಿ ಹೋರಾಟ ನಡೆಸಿದ್ದು, ಜೀವನ ಭದ್ರತೆ ಒದಗಿಸಲು ಶ್ರಮಿಸುತ್ತಿದೆ. ಒಗ್ಗಟ್ಟು ಕಾಯ್ದುಕೊಂಡಾಗ ಮಾತ್ರ ಕಾರ್ಮಿಕರ ಹಕ್ಕುಗಳನ್ನು ಸುಲಭ ರೀತಿಯಲ್ಲಿ ಪಡೆದುಕೊಳ್ಳಲು ಸಾಧ್ಯ ಎಂದರು.
ಕಾರ್ಯದರ್ಶಿ ಮಂಜುನಾಥ ಡಗ್ಗಿ ಮಾತನಾಡಿ, ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಪೂರಕವಾದ ಯೋಜನೆಗಳ ಅನುಷ್ಠಾನಕ್ಕೆ ಸಂಘಟನೆ ಸಾಥ್ ನೀಡಲಿದೆ ಎಂದರು.
ೆಡರೇಷನ್ ಜಿಲ್ಲಾಧ್ಯಕ್ಷ ಕಾಸಿಂ ಸರ್ಕಾರ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಲಕ್ಷ್ಮೀದೇವಿ, ಕೆ.ಹುಸೇನಪ್ಪ ಇತರರಿದ್ದರು. ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮುತ್ತಣ್ಣ (ಅಧ್ಯಕ್ಷ), ಮಂಜುನಾಥ ಡಗ್ಗಿ (ಕಾರ್ಯದರ್ಶಿ), ಸತ್ಯಪ್ಪ (ಖಜಾಂಚಿ), ರಮೇಶ ಬೂದಗುಂಪಾ, ಶಂಕರ ಸಂಗಾಪುರ, ಕನಕಪ್ಪ, ನಬೀಸಾಬ್, ನಿಂಗಪ್ಪ ಕೊಜ್ಜಿ (ಉಪಾಧ್ಯಕ್ಷರು), ಹುಸೇನಿ ಅಣ್ಣೂರುಗೌರಮ್ಮಕ್ಯಾಂಪ್, ಹುಸೇನ್ ಬಾಷಾ, ಹನುಮಂತ ಬೆಣಕಲ್, ರಾಜೇಸಾಬ್, ಚೈತ್ರಕುಮಾರ (ಸಹಕಾರ್ಯದರ್ಶಿ), ಜಿಲಾನ್ ಪಾಷಾ, ಯಮನೂರಡಗ್ಗಿ, ಬಾಷಾಸಾಬ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.