ಜಿಲ್ಲೆ

ಚಿಕ್ಕಬೆಣಕಲ್‌ನಲ್ಲಿ ಜೋಡು ರಥೋತ್ಸವ ಅದ್ದೂರಿ

ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಶ್ರೀ ಗುರು ಬೆಟ್ಟದೇಶ್ವರ ಮತ್ತು ಶ್ರೀ ಲಿಂಗೇಶ್ವರ ದೇವಾಲಯದ ಜಾತ್ರಾಮಹೋತ್ಸವ ನಿಮಿತ್ತ ಜೋಡು ರಥೋತ್ಸವ ಶನಿವಾರ ಅದ್ದೂರಿಯಾಗಿ ಜರುಗಿತು.

ಮಾ.21ರಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಮಾ.22ರಂದು ಮೂರ್ತಿಗಳಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ಸಾಮೂಹಿಕ ವಿವಾಹ ಮತ್ತು ಪ್ರಸಾದ ವಿತರಣೆ ಜರುಗಿತು. ಸಂಜೆ ವೇಳೆ ಸರ್ವಾಲಂಕೃತ ರಥೋತ್ಸವನ್ನು ಪಾದಗಟ್ಟೆವರಿಗೂ ಅಪಾರ ಭಕ್ತ ಸಮೂಹದೊಂದಿಗೆ ನೆರವೇರಿಸಲಾಯಿತು.

ಹೆಬ್ಬಾಳ ಬೃಹನ್ಮಠದ ನಾಗಭೂಷಣಶಿವಾಚಾರ್ಯರು, ಕಂಪ್ಲಿ ಕಲ್ಮಠದ ಅಭಿನವ ಪ್ರಭು ಸ್ವಾಮೀಜಿ, ಹೂವಿನಹಡಗಲಿಯ ಹಿರೇಶಾಂತವೀರ ಸ್ವಾಮೀಜಿ, ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಸಿದ್ದೇಶ್ವರ ಶಿವಾಚಾರ್ಯರು, ಹಾವನೂರಿನ ಶಿವಕುಮಾರ ಸ್ವಾಮೀಜಿ, ಸುಳೇಕಲ್ ಬಹನ್ಮಠದ ಭುವನೇಶ್ವರಯ್ಯ ಸ್ವಾಮೀಜಿ, ಉಡುಮಕಲ್ ಹಿರೇಮಠದ ವೀರಬಸಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮಾಜಿ ಶಾಸಕ ಪರಣ್ಣಮುನವಳ್ಳಿ, ಮುಖಂಡರಾದ ಲಿಂಗಪ್ಪ ಮಠದ್, ದೊಡ್ಡ ಬಸವರಾಜ ಸೇರಿ ವಿವಿಧ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.