ಗಂಗಾವತಿ ಮರಳಿ ಗ್ರಾಮದ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ವಿಭಾಗದ ಪ್ರಮುಖರ ಸಭೆ, ವಿವಿಧ ಕ್ಷೇತ್ರದ ಗಣ್ಯರ, ಸಾಧಕರ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪಿ.ರಾಜೀವ್ ಕುಡಚಿ ಬುಧವಾರ ಮಾತನಾಡಿದರು. ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಸಂಸದ ಬಿ.ವಿ.ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೆರಿ, ಕೊಪ್ಪಳ ಜಿಲ್ಲಾದ್ಯಕ್ಷ ಬಸವರಾಜ ದಢೇಸುಗೂರ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಸೊಮಶೇಖರ ರೆಡ್ಡಿ ಇದ್ದರು.  
ಜಿಲ್ಲೆ

ಪಕ್ಷವನ್ನು ಮಂಡಲ ಮಟ್ಟದಿಂದ ಸಂಘಟನೆ, ಮಾಜಿ ಶಾಸಕ ಪಿ.ರಾಜೀವ್ ಕುಡಚಿ ಹೇಳಿಕೆ

ಗಂಗಾವತಿ: ಸರ್ಕಾರ ವೈಲ್ಯವನ್ನು ಜನರಿಗೆ ತಿಳಿಸುವುದರ ಜತೆಗೆ ಬಿಜೆಪಿಯನ್ನು ಮಂಡಲ ಮಟ್ಟದಲ್ಲಿ ಸಂಘಟಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪಿ.ರಾಜೀವ್ ಕುಡಚಿ ಹೇಳಿದರು.

ತಾಲೂಕಿನ ಮರಳಿ ಗ್ರಾಮದ ಖಾಸಗಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಳ್ಳಾರಿ ವಿಭಾಗದ ಪ್ರಮುಖರ ಸಭೆ, ವಿವಿಧ ಕ್ಷೇತ್ರದ ಗಣ್ಯರ, ಸಾಧಕರ ಸಭೆಯಲ್ಲಿ ಮಾತನಾಡಿದರು.

ಮುಂಬರುವ ಚುನಾವಣೆ ಹಿತದೃಷ್ಟಿಯಿಂದ ಪಕ್ಷವನ್ನು ಮಂಡಲ ಮಟ್ಟದಲ್ಲಿ ಸಂಘಟಿಸಲಾಗುತ್ತಿದೆ. 150 ಪ್ರಮುಖರನ್ನು ಸಭೆಯ ಮೂಲಕ ಒಗ್ಗೂಡಿಸಲಾಗುತ್ತಿದೆ. ಸಂಘಟನೆ ಜತೆಗೆ ಪ್ರಧಾನಿ ನರೇಂದ್ರ ಮೋದಿ 11 ವರ್ಷದ ಆಡಳಿತಾವಧಿಯ ಸಾಧನೆ ಬಗ್ಗೆ ವಿಶ್ಲೇಷಿಸಲಾಗುತ್ತಿದ್ದು, ಪ್ರಮುಖರ ಅಭಿಪ್ರಾಯ ಸಂಗ್ರಹವಾಗಲಿದೆ.

ಸಂಘಟನೆ ಜತೆಗೆ ಸರ್ಕಾರದ ವೈಲ್ಯವನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಜು.20ರಂದು ಮರಳಿಯ ರಿಯಲ್‌ರಿಚ್ ಕೌಂಟಿ ಸಭಾಂಗಣದಲ್ಲಿ ವಿಭಾಗದ ಮಟ್ಟದ ಪ್ರಮುಖರ, ಗಣ್ಯರ ಮತ್ತು ಸಾಧಕರ ಸಭೆ ನಡೆಯಲಿದೆ. ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಸಭೆಯು ಉದ್ದೇಶ, ಪೂರ್ವ ಸಿದ್ಧತೆ ಮತ್ತು ಮಂಡಲ ವ್ಯಾಪ್ತಿಯಲ್ಲಿರುವ ಹಾಲಿ, ಮಾಜಿ ಜನಪ್ರತಿನಿಧಿಗಳು, ಸಾಧಕರು, ಗಣ್ಯರನ್ನು ಆಹ್ವಾನಿಸುವ ಬಗ್ಗೆ ಸಭೆಯ ಉಸ್ತುವಾರಿ ಶಿವಮೊಗ್ಗ ಮೇಘರಾಜ್ ಮಾಹಿತಿ ನೀಡಿದರು.

ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಸಂಸದ ಬಿ.ವಿ.ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೆರಿ, ಕೊಪ್ಪಳ ಜಿಲ್ಲಾದ್ಯಕ್ಷ ಬಸವರಾಜ ದಢೇಸುಗೂರ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಸೊಮಶೇಖರರೆಡ್ಡಿ ಇದ್ದರು.